ಮರಳಲ್ಲಿ ಅರಳಿದ ಬೃಹತ್ ಭಾರತ
ನಿಟ್ಟೆ: ನಿಟ್ಟೆ ವಿದ್ಯಾಸಂಸ್ಥೆಯ ಆವರಣದಲ್ಲಿ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳು ಈ ಬಾರಿ ಸ್ವಾತಂತ್ರ್ಯ ದಿನವನ್ನು ಅವಿಸ್ಮರಣೀಯವಾಗಿಸಿದರು. ಸುಮಾರು 800 ಮಂದಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ವರ್ಗದವರ ಸಹಕಾರದಲ್ಲಿ ಮಣಿಪಾಲದ ಮರಳು ಚಿತ್ರಕಾರ ಶ್ರೀನಾಥ್ ಇವರ ನಿರ್ದೇಶನದೊಂದಿಗೆ ನಿಟ್ಟೆ ವಿದ್ಯಾಲಯದ ಆವರಣದಲ್ಲಿರುವ ಹೊರಾಂಗಣ ಸಭಾಂಗಣದೊಳಗೆ ಸುಮಾರು 11500 ಚದರ ಅಡಿ ವಿಸ್ತೀರ್ಣದಲ್ಲಿ ಭಾರತದ ಮರಳು ಶಿಲ್ಪ ರಚಿಸಿ ಗಮನ ಸೆಳೆದರು. ವಿದ್ಯಾ ಸಂಸ್ಥೆಯ ಅಧ್ಯಕ್ಷ ಎನ್. ವಿನಯ ಹೆಗ್ಡೆ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಗಾಂಧಿ ಹಾಗೂ ಈ ಪ್ರದೇಶದ ಕಾರ್ನಾಡ್ ಸದಾಶಿವರಾಯರ ಸಹಿತ ಅನೇಕ ದೇಶಭಕ್ತ ನೇತರಾರ ಒಗ್ಗಟ್ಟು ಹಾಗೂ ತ್ಯಾಗ ಬಲಿದಾನಗಳ ಫಲದಿಂದಾಗಿ ನಮ್ಮ ದೇಶ ಸ್ವಾತಂತ್ರ್ಯ ಪಡೆಯುವಂತಾಯಿತು. ಇದನ್ನು ಉಳಿಸಿ, ಬೆಳೆಸಿ, ಭ್ರಷಾಚಾರ ಮುಕ್ತ ದೇಶವನ್ನಾಗಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.