ಜಿಲ್ಲೆಯಲ್ಲಿ ಸಾಧಾರಣ ಮಳೆ
ಉಡುಪಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕೆಲವೊಮ್ಮೆ ವಿಪರೀತ ಮಳೆ ಸುರಿದು ನಂತರ ಬಿಸಿಲಿನ ವಾತಾವರಣ ಏರ್ಪಡುತ್ತದೆ. ಬುಧವಾರ ಜಿಲ್ಲೆಯಲ್ಲಿ ಕೆಲವು ಕಡೆ ಬೆಳಗ್ಗೆ ಜೋರಾಗಿ ಮಳೆಯಾಗಿದ್ದು, ನಂತರ ಬಿಸಿಲು ಮೂಡಿತ್ತು. ಮಳೆ ವಿವರ- ಬುಧವಾರ ಮುಂಜಾನೆವರೆಗೂ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಸರಾಸರಿ 11.8 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 5.4 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 6.4 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 23.6 ಮಿ.ಮೀ. ಮಳೆಯಾಗಿದೆ.
ಇಂದು ನಾರಾಯಣಗುರು ಜನ್ಮದಿನಾಚರಣೆ
ಉಡುಪಿ: ಇಲ್ಲಿನ ಅಂಬಲಪಾಡಿ ಶ್ರೀವಿಠೋಭ ಭಜನಾ ಮಂದಿರದಲ್ಲಿ ಆ.22ರಂದು ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮೀಜಿ ಅವರ 159ನೇ ಜನ್ಮ ದಿನಾಚರಣೆ ಸಂಜೆ 5ರಿಂದ 9ರತನಕ ಭಜನಾ ಕಾರ್ಯಕ್ರಮದೊಂದಿಗೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.