ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ: ನಗರ ಸಭೆ ಮೀಸಲಾತಿ ಪ್ರಕಟ

Lingaraj Badiger
Updated On : 24 Aug 2013, 12:30 pm

ಉಡುಪಿ: ಸರ್ಕಾರ ಉಡುಪಿ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾತಿ ಕಲ್ಪಿಸಿದೆ. ಇದರೊಂದಿಗೆ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೇರಲು ಹಪಹಪಿಸುತ್ತಿದ್ದವರಿಗೆ ನಿರಾಶೆಯಾಗಿದೆ. ಉಡುಪಿ ನಗರಸಭೆಯ ಸುಬ್ರಹ್ಮಣ್ಯ ನಗರ ವಾರ್ಡ್‌ನ ಯುವರಾಜ ಹಾಗೂ ವಡಭಾಂಡೇಶ್ವರ ವಾರ್ಡ್‌ನ ಸಂಧ್ಯಾ ಕುಮಾರಿ ಇಬ್ಬರು ಪರಿಶಿಷ್ಟ ಜಾತಿ ಸದಸ್ಯರಿದ್ದಾರೆ. ಆದರೆ, ಉಪಾಧ್ಯಕ್ಷ ಸ್ಥಾನ ಮಹಿಳಾ ಮೀಸಲಾತಿಯಾಗಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಮಹಿಳೆಯನ್ನು ಆಯ್ಕೆ ಮಾಡುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಉಡುಪಿ ನಗರಸಭೆಗೆ ಯುವರಾಜನಿಗೆ ಅವಕಾಶಗಳು ಹೆಚ್ಚಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement