ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕೃಷ್ಣಾಷ್ಟಮಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

Lingaraj Badiger
Updated On : 24 Aug 2013, 12:30 pm

ಉಡುಪಿ: ಉಡುಪಿಯಲ್ಲಿ ಅತ್ಯಂತ ವೈಭವದಿಂದ ಆಚರಿಸಲ್ಪಡುವ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 8 ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾಜಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶುಕ್ರವಾರ ಸಂಜೆ ಪರ್ಯಾಯ ಸೋದೆ ಮಠದ ಶ್ರೀವಿಶ್ವವವ್ವಭ ತೀರ್ಥರು ಈ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಮತ್ತು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಉಪಸ್ಥಿತರಿದ್ದರು.
ಸಾಂಕೇತಿಕ ಉದ್ಘಾಟನಾ ಕಾರ್ಯಕ್ರಮದ ನಂತರ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಕಲಾವಿದರಾದ ಕೊಲ್ಕತ್ತಾ ಪಂಡಿತ್ ಪುರ್ಬಾಯನ್ ಚಟರ್ಜಿ ಅವರ ಸಿತಾರ್ ಮತ್ತು ಪಂಡೀತ್ ರಾಕೇಶ್ ಚೌರಾಸಿಯಾ ಅವರ ಬಾನ್ಸುರಿ ವಾದನದ ಜುಗಲ್‌ಬಂದಿ ಕಾರ್ಯಕ್ರಮ ನಡೆಯಿತು.

ಕೃಷ್ಣ ಮಠದಲ್ಲಿಂದು ಶಾಸ್ತ್ರೀಯ ಸಂಗೀತ
ಉಡುಪಿ: ಶ್ರೀ ಕೃಷ್ಣ ಜಯಂತ್ಯುತ್ಸವದ ಪ್ರಯುಕ್ತ ಕೃಷ್ಣ ಮಠದಲ್ಲಿ 23ರಿಂದ 30ರವರೆಗೆ ಅಷ್ಟದಿನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಪ್ರಯುಕ್ತ ಶನಿವಾರ ಸಂಜೆ 7.30ಕ್ಕೆ ರಾಜಾಂಗಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಾದ ರಂಜನಿ ಮತ್ತು ಗಾಯತ್ರಿ ಚೆನ್ನೈ ಅವರಿಂದ ಕರ್ಣಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪಿಟೀಲಿನಲ್ಲಿ ಎಚ್.ಎಂ. ಸ್ಮಿತಾ, ಮೃದಂಗದಲ್ಲಿ ಎಚ್.ಎಸ್. ಸುಧೀಂದ್ರ ಮತ್ತು ಘಟಂನಲ್ಲಿ ಎಸ್. ಶ್ರೀಶೈಲಂ ಸಹಕರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement