ನಿಟ್ಟೆ ಆರೋಗ್ಯ ಕೇಂದ್ರದಲ್ಲಿ ಘರ್ಷಣೆ: ಇತ್ತಂಡ ದೂರು
ಕಾರ್ಕಳ: ನಿಟ್ಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯ ಹಾಗೂ ಆಸ್ಪತ್ರೆ ಸಿಬ್ಬಂದಿ ಹೊಡೆದಾಡಿದ ಘಟನೆ ಗುರುವಾರ ಸಂಭವಿಸಿದೆ. ಮಲೇರಿಯಾ ಹಾಗೂ ಏಡ್ಸ್ ಜಿಲ್ಲಾ ಪ್ರಭಾರ ನಿಯಂತ್ರಣಾಧಿಕಾರಿ ಡಾ. ಅಶೋಕ್ ದೂರುದಾರ. ತಾನು ಆಸ್ಪತ್ರೆಗೆ ಭೇಟಿಗೆ ಹೋಗಿದ್ದ ವೇಳೆ ಆರೋಪಿ ಸಿಬ್ಬಂದಿ ಸುಧಾಕರ್ ಎಂಬಾತ, ತನನ್ನು ಉದ್ದೇಶಿಸಿ ಬೈದಿದ್ದಲ್ಲದೆ, ರಟ್ಟೆ ಹಿಡಿದು ಹಲ್ಲೆಗೆ ಯತ್ನಿಸಿ ಜೀವಬೆದರಿಕೆ ಹಾಕಿದ್ದಾರೆ. ಅಲ್ಲದೆ, ಕರ್ತೆವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಇತ್ತ ಸುಧಾಕರ್ ಪ್ರತಿದೂರು ನೀಡಿದ್ದು, ತಾನು ಆಸ್ಪತ್ರೆಯಲ್ಲಿದ್ದ ವೇಳೆ ಜಿಲ್ಲಾ ಪ್ರಭಾರ ಮಲೇರಿಯಾ ಹಾಗೂ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅಶೋಕ್ ಎಂಬವರು ತನಗೆ ಕಿರುಕುಳ ನೀಡಿದ್ದಲ್ಲದೇ ಜಾತಿ ನಿಂದನೆ ಮಾಡಿರುವುದಾಗಿ ಆರೋಪಿಸಿದ್ದಾರೆ.