ಕಟೀಲು: 6ನೇ ಮೇಳ ಆರಂಭಕ್ಕೆ ಸಾಮೂಹಿಕ ಪ್ರಾರ್ಥನೆ
ಮೂಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಪ್ರಸ್ತುತ ಸಾಲಿನಲ್ಲಿ ತಿರುಗಾಟ ನಡೆಯಲಿರುವ 6ನೇ ಯಕ್ಷಗಾನ ಮೇಳದ ಆರಂಭದ ಬಗ್ಗೆ ದೇವಳದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಪ್ರಾರ್ಥನೆಗೈದರು. ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ಸೇರಿದಂತೆ ಆಸ್ರಣ್ಣ ಬಂಧುಗಳು ಹಾಗೂ ಭಕ್ತರು ಇದ್ದರು.