ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ರೇಲ್ವೆ ಮೇಲ್ಸೇತುವೆ ಮಣ್ಣು ಕುಸಿದು ಮಹಿಳೆ ಸಾವು

Vishwanath S
Updated On : 30 Aug 2013, 10:36 am

ಕಾರವಾರ: ಇಲ್ಲಿನ ಶಿರವಾಡ ರೇಲ್ವೆ ನಿಲ್ದಾಣದ ಬಳಿ ಶುಕ್ರವಾರ ರೇಲ್ವೆ ಮೇಲ್ಸೇತುವೆ ಕಾಮಗಾರಿ ನಡೆಸುತ್ತಿದ್ದಾಗ ಮಣ್ಣು ಕುಸಿದು ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ಹಳೆಕೋಟೆ ನಿವಾಸಿ ಲಕ್ಷ್ಮೀ ಗಂಗಾಧರ ನಾಯ್ಕ (40) ಮೃತಪಟ್ಟ ಮಹಿಳೆ. ಏಳೆಂಟು ಕಾರ್ಮಿಕರು ಮೇಲ್ಸೇತುವೆ ಕಾಮಗಾರಿಯಲ್ಲಿ ನಿರತರಾಗಿದ್ದರು. ಸಂಜೆ 5 ಗಂಟೆ ಸುಮಾರಿಗೆ ಹಠಾತ್ತಾಗಿ ಮಣ್ಣು ಕುಸಿಯಿತು. ಉಳಿದವರು ಓಡಿ ಬಂದರು. ಆದರೆ ಲಕ್ಷ್ಮೀ ಓಡುವ ಪ್ರಯತ್ನದಲ್ಲಿದ್ದಾಗಲೇ ಮೈಮೇಲೆ ಮಣ್ಣು ಕುಸಿದು ಬಿತ್ತು. ತಕ್ಷಣ ಜೆಸಿಬಿ ತಂದು ಮಣ್ಣು ತೆಗೆಯಲಾಯಿತು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಕಾರ್ಯಾಚರಣೆಯಲ್ಲಿ ನಿರತರಾದರು. ಆದರೆ, ಆ ವೇಳೆಗಾಗಲೇ ಮಹಿಳೆ ಮೃತಪಟ್ಟಿದ್ದಳು. ಸುರಕ್ಷತಾ ಕ್ರಮ ಕೈಗೊಳ್ಳದೆ ಕಾಮಗಾರಿ ನಡೆಸಿದ್ದರಿಂದಲೇ ಈ ರೀತಿಯ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement