ಸಮವಸ್ತ್ರ ಪ್ರತಿಷ್ಠೆಯ ಸಂಕೇತವಲ್ಲ: ಹೊನ್ನಮ್ಮ
ಕುಂದಾಪುರ: ಸಮವಸ್ತ್ರ ಎನ್ನುವುದು ಪ್ರತಿಷ್ಠೆಯ ಸಂಕೇತವಲ್ಲ. ಅದು ಮಕ್ಕಳಲ್ಲಿ ಸಮಾನತೆ ಮೂಡಿಸಿ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಸಹಕಾರಿಯಾಗಿದೆ ಎಂದು ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೊನ್ನಮ್ಮ ನಾಯಕ ಹೇಳಿದರು.
ಅವರು ಇಲ್ಲಿನ ಗುಜ್ಜಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದಿಂದ ಅಂಗನವಾಡಿ ಮಕ್ಕಳಿಗೆ ನೀಡಲಾದ ಸಮವಸ್ತ್ರ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪ್ರಕಾಶ್ ಪೂಜಾರಿ, ಕೃಷ್ಣ ಗುಜ್ಜಾಡಿ, ಗ್ರಾಮ ಪಂಚಾಯಿತಿ ಸದಸ್ಯ ಅಲ್ಫ್ರೇಡ್ ಪಿಂಟೋ, ಕಾವ್ಯ ಶೇರುಗಾರ್ ಇದ್ದರು.