ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಉಡುಪಿ: ನಾಳೆ ಸರ್ವಧರ್ಮ ಕ್ರಿಸ್‌ಮಸ್ ಆಚರಣೆ

Vishwanath S
Updated On : 5 Dec 2013, 11:21 am

ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಸೌಹಾರ್ದ ಸಮಿತಿ ವತಿಯಿಂದ ಪ್ರೀತಿ ಮತ್ತು ಶಾಂತಿ ಸಾರುವ   ಸರ್ವಧರ್ಮ ಕ್ರಿಸ್‌ಮಸ್ ಆಚರಣೆ 6ರಂದು ಶುಕ್ರವಾರ ಸಂಜೆ 7 ಗಂಟೆಗೆ ಶೋಕಮಾತಾ ಇಗರ್ಜಿಯ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಿ.ಎಸ್.ಐ. ಲೊಂಬಾರ್ಡ್ ಮೆಮೊರಿಯಲ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ರತೀಶ್ ಜಾನ್ಸನ್, ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಗಣನಾಥ ಎಕ್ಕಾರ್, ತೋನ್ಸೆ ಹೆಲ್ತ್ ಸೆಂಟರ್‌ನ ಆಡಳಿತ ನಿರ್ದೇಶಕ ಡಾ. ಮೊಹಮ್ಮದ್ ರಫೀಕ್, ಉಡುಪಿ ಶೋಕಮಾತಾ ಇಗರ್ಜಿಯ ಪ್ರಧಾನ ಧರ್ಮಗುರು ವಂ. ಫ್ರೆಡ್ ಮಸ್ಕರೇನ್ಹಸ್ ಪ್ರತಿ ಮತ್ತು ಶಾಂತಿಯ ಸಂದೇಶ ನೀಡಲಿದ್ದಾರೆ. ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖ ಆಕರ್ಷಣೆಯಾಗಿ ಕಿನ್ನಿಮೂಲ್ಕಿಯ ಆಲನ್ ಮೆಂಡೊನ್ಸಾ ನಿರ್ಮಿಸಿದ ಬೃಹತ್ ಗಾತ್ರದ ನಕ್ಷತ್ರದ ಮಾದರಿಯ ಗೂಡು ದೀಪದ ಪ್ರತಿಷ್ಠಾಪನೆ ನಡೆಯಲಿದೆ. ಈ ಗೂಡುದೀಪ ಸುಮಾರು 6 ಅಡಿ ಉದ್ದ ಹಾಗೂ 6 ಅಗಲ ಹೊಂದಿದೆ. ಇದಲ್ಲದೆ ಕ್ರಿಸ್‌ಮಸ್ ಕೇಕ್ ಕತ್ತರಿಸಿ ಸರ್ವರಿಗೂ ವಿತರಿಸಲಾಗುವುದು. ಲಕ್ಕಿ ಕೇಕ್ ಡ್ರಾ, ಕ್ರಿಸ್‌ಮಸ್ ಗೀತೆಗಳು, ನೃತ್ಯರೂಪಕ, ಮಂಗಳೂರಿನ ಪ್ರಖ್ಯಾತ ವೈಟ್ ಡೋವ್ಸ್ ತಂಡದವರಿಂದ ಕ್ರಿಸ್‌ಮಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಡೆನಿಸ್  ಡೆಸಾ, ಆಲ್ಫೋನ್ಸ್ ಡಿ' ಕೋಸ್ತಾ, ನಿತ್ಯಾನಂದ ಒಳಕಾಡು, ಬುಡಾನ್ ಬಾಷಾ, ಲೆಸ್ಲಿ ಕರ್ನಲಿಯೋ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement