ಪಾಡಿಗಾರ-ಖಜಾನೆ ಮುನಿಯಾಲು ರಸ್ತೆ ದುರಸ್ತಿಗೆ ಸಚಿವ ಸೊರಕೆಗೆ ಮನವಿ
ಹೆಬ್ರಿ: ಉಡುಪಿ ತಾಲೂಕಿನ ಪೆರ್ಡೂರು ಪಾಡಿಗಾರ ಕೈಕಂಬ ಖಜಾನೆ ಮೂಲಕ ಕಾರ್ಕಳ ತಾಲೂಕಿನ ಮುನಿಯಾಲಿಗೆ ಸಂಪರ್ಕ ಕಲ್ಪಿಸುವ ಖಜಾನೆ ಮುನಿಯಾಲು ರಸ್ತೆ ಸಂಪೂರ್ಣ ಹದಗೆಟ್ಟು ಸಂಚಾರವೇ ಅಸಾಧ್ಯವಾಗಿದೆ.
ಶೀಘ್ರವಾಗಿ ಮರು ಡಾಂಬರೀಕರಣ ನಡೆಸುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆಗೆ ಖಜಾನೆಯ ಗ್ರಾಮಸ್ಥರು ಇತ್ತೀಚೆಗೆ ಪೆರ್ಡೂರಿನಲ್ಲಿ ಮನವಿ ಸಲ್ಲಿಸಿದರು.
ಬೃಹತ್ ಹೊಂಡಗಳಿಂದ ಸಂಚಾರ ಮಾಡುವುದೇ ಪ್ರಯಾಸವಾಗಿದ್ದು ಬಾಡಿಗೆಯ ರಿಕ್ಷಾ, ಕಾರು ಸಹಿತ ಯಾವುದೇ ವಾಹನಗಳು ಖಜಾನೆ ರಸ್ತೆಯಲ್ಲಿ ಬರಲು ಒಪ್ಪದಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದಿದ್ದಾರೆ.
ಖಜಾನೆಯ ರವಿ ಕುಮಾರ್, ಖಜಾನೆ ಮಯೂರ್ ಹೆಗ್ಡೆ, ಕರುಣಾಕರ ಹೆಗ್ಡೆ, ಕೃಷ್ಣಮೂರ್ತಿ ಭಟ್, ವಿಶ್ವನಾಥ್, ಖಜಾನೆ ಸುಕುಮಾರ್ ಮುನಿಯಾಲ್ ಇದ್ದರು.