141 ಗ್ರಾ.ಪಂ.ಗೆ ಕಂಪ್ಯೂಟರ್ ವಿತರಣೆ
ಉಡುಪಿ: ಆಡಳಿತ ವ್ಯವಸ್ಥೆಯನ್ನು ಸಬಲಗೊಳಿಸುವುದಕ್ಕಾಗಿ ಗ್ರಾಮ ಪಂಚಾಯಿತಿಗಳನ್ನು ಸಶಕ್ತಗೊಳಿಸಬೇಕಾಗಿದೆ. ವಿಕೇಂದ್ರೀಕೃತ ಪಂಚಾಯತ್ರಾಜ್ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದರಿಂದ ಜನರಿಗೆ ಜನಪರ ಯೋಜನೆಗಳು ತಲುಪುತ್ತದೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು. ಅವರು ವಾರಂಬಳ್ಳಿ ಗ್ರಾ.ಪಂ. ವಠಾರದಲ್ಲಿ, ತಮ್ಮ ಸಂಸದರ ನಿಧಿಯಿಂದ ಉಡುಪಿ ಜಿಲ್ಲೆಯ 4 ವಿಧಾನಸಭಾ ವ್ಯಾಪ್ತಿಯ 141 ಗ್ರಾ.ಪಂ.ಗಳಿಗೆ ರು. 48 ಲಕ್ಷ ಅನುದಾನದಡಿ ತಲಾ ಒಂದೊಂದು ಕಂಪ್ಯೂಟರ್ ಸಾಂಕೇತಿಕವಾಗಿ ವಿತರಿಸಿ ಮಾತನಾಡಿದರು. ಸಮಾರಂಭದಲ್ಲಿ ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಂಜುನಾಥಯ್ಯ, ಬ್ರಹ್ಮಾವರ ವಿಶೇಷ ತಹಸೀಲ್ದಾರ್ ಬಿ.ಪಿ. ಪೂಜಾರಿ, ಜಿ.ಪಂ. ಸದಸ್ಯೆ ಮಲ್ಲಿಕಾ ಬಿ. ಪೂಜಾರಿ, ತಾ.ಪಂ. ಸದಸ್ಯರಾದ ಕೇಶವ ಕುಮಾರ್, ಉಮೇಶ್ ನಾಯ್ಕ್, ವಿಠಲ ಪೂಜಾರಿ, ಉಷಾ ಕೆ. ಪೂಜಾರಿ, ಜಿ.ಪಂ. ಮಾಜಿ ಅಧ್ಯಕ್ಷ ಬಿ. ಭುಜಂಗ ಶೆಟ್ಟಿ, ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾರದಾ, ಹಂದಾಡಿ ಗ್ರಾ.ಪಂ. ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಚಾಂತಾರು ಗ್ರಾ.ಪಂ. ಉಪಾಧ್ಯಕ್ಷೆ ಚಂದ್ರಾವತಿ, ಹಾರಾಡಿ ಗ್ರಾ.ಪಂ. ಅಧ್ಯಕ್ಷ ನಾರಾಯಣ ಶ್ರೀಯಾನ್, ಕುಂಜಾಲು ಗ್ರಾ.ಪಂ. ಅಧ್ಯಕ್ಷೆ ಶಕುಂತಲಾ ನಾಯಕ್ ಇದ್ದರು.