ಉಡುಪಿ; ಸರ್ವಧರ್ಮ ಕ್ರಿಸ್ಮಸ್ ಆಚರಣೆ
ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಸೌಹಾರ್ದ ಸಮಿತಿ ವತಿಯಿಂದ ಶುಕ್ರವಾರ ನಗರದ ಶೋಕಮಾತಾ ಇಗರ್ಜಿಯಲ್ಲಿ ಸರ್ವಧರ್ಮ ಕ್ರಿಸ್ಮಸ್ ಆಚರಿಸಲಾಯಿತು.
ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ, ತುಳು ಸಂಶೋಧಕ, ಪ್ರಾದ್ಯಾಪಕ ಡಾ. ಗಣನಾಥ ಎಕ್ಕಾರ್, ನಗರದ ಮಿಶನ್ ಆಸ್ಪತ್ರೆಯ ನಿರ್ದೇಶಕ ಡಾ. ರತೀಶ್ ಜಾನ್ಸನ್, ಖ್ಯಾತ ವೈದ್ಯ ಡಾ. ರಫೀಕ್ ಹೂಡೆ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಷಪ್ ಡಾ. ಜೆರಾಲ್ಡ್ ಲೋಬೊ ಮಾತನಾಡಿದರು.
ಉಡುಪಿ ಶೋಕ ಮಾತಾ ಚರ್ಚ್ ಪ್ರಧಾನ ಧರ್ಮಗುರು ಫ್ರೆಡ್ ಮಸ್ಕರೇನ್ಹಸ್, ಕಾರ್ಯಕ್ರಮದ ಸಂಯೋಜಕರಾದ ಫಾ.ಡೆನಿಸ್ ಡೇಸಾ, ಕಾರ್ಯಕ್ರಮದ ಸಂಚಾಲಕ ಆಲ್ಫೋನ್ಸ್ ಡಿ'ಕೋಸ್ತಾ, ಕೆಥೊಲಿಕ್ ಸಭಾ ಅಧ್ಯಕ್ಷ ಲೆಸ್ಲಿ ಕರ್ನೆಲಿಯೊ, ಬೊನಿಫಾಸ್ ಡಿ'ಸೋಜಾ, ಸಮಾಜ ಸೇವಕ ನಿತ್ಯಾನಂದ ಒಳಕಾಡು, ಎಡ್ವಿನ್ ಆಳ್ವಾ ಇದ್ದರು.
ಕಾರ್ಯಕ್ರಮದ ಬಳಿಕ ಮಂಗಳೂರಿನ ವೈಟ್ ಡೌಸ್ ತಂಡದಿಂದ ಕ್ರಿಸ್ಮಸ್ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.