ರಾಜ್ಯ ಮಟ್ಟದ ನಾಟಕ ಸ್ಪರ್ಧೆ: 'ಮರಣ ಮೃದಂಗ' ಪ್ರಥಮ
ಉಡುಪಿ: ನಾಡಿನ ಹಿರಿಯ ನಾಟಕ ಸಂಸ್ಥೆ ಉಡುಪಿ ರಂಗಭೂಮಿ ಆಯೋಜಿಸಿದ್ದ 34ನೇ ವರ್ಷದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಬೈಂದೂರಿನ ಲಾವಣ್ಯ ತಂಡ ಪ್ರದರ್ಶಿಸಿದ 'ಮರಣ ಮೃದಂಗ' ಪ್ರಥಮ ಬಹುಮಾನ ಗೆದ್ದುಕೊಂಡಿದೆ. ಈ ನಾಟಕ 4 ವಿಭಾಗಗಳಲ್ಲಿ ಪ್ರಥಮ ಮತ್ತು 2 ವಿಭಾಗಗಳಲ್ಲಿ ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡಿದೆ.
ಶಿವಮೊಗ್ಗದ ಕಲಾಜ್ಯೋತಿ ತಂಡದ 'ಬಿಂಬ' ನಾಟಕಕ್ಕೆ ದ್ವಿತೀಯ ಮತ್ತು ಹಾರಾಡಿಯ ಭೂಮಿಕಾ ತಂಡದ 'ಅಗ್ನಿಲೋಕ' ನಾಟಕ ತೃತೀಯ ಬಹುಮಾನವನ್ನು ತನ್ನದಾಗಿಸಿಕೊಂಡಿವೆ.
ಈ ಬಾರಿ ಸಾಕಷ್ಟು ತಂಡಗಳು ಪ್ರವೇಶ ಬಯಸಿದ್ದರೂ, ಒಟ್ಟು 12 ತಂಡಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಬಹುಮಾನಗಳನ್ನು ಜ. 5 ರಂದು ವಿತರಿಸಲಾಗುತ್ತದೆ ಎಂದು ರಂಗಭೂಮಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಶಸ್ತಿಗಳ ವಿವರ: ಶ್ರೇಷ್ಟ ನಿರ್ದೇಶನ- ನಿರ್ದೇಶಕ ರಾಜೇಂದ್ರ ಕಾರಂತ್ (ಮರಣ ಮೃದಂಗ) ಪ್ರಥಮ, ಮಧುಸೂಧನ ಜೆ. ಘಾಟೆ (ಬಿಂಬ) ದ್ವಿತೀಯ, ಬಿ.ಎಸ್. ರಾಮ್ ಶೆಟ್ಟಿ (ಅಗ್ನಿಲೋಕ) ತೃತೀಯ.
ಶ್ರೇಷ್ಟ ನಟ - ಯೋಗೇಶ್ ಬಂಕೇಶ್ವರ (ಮರಣ ಮೃದಂಗ) ಪ್ರಥಮ, ಬಿ. ಗಣೇಶ ಕಾರಂತ (ಮರಣ ಮೃದಂಗ) ದ್ವಿತೀಯ, ಬಿ.ಎಸ್. ರಾಮ್ ಶೆಟ್ಟಿ (ಅಗ್ನಿಲೋಕ) ತೃತೀಯ.
ಶ್ರೇಷ್ಟ ನಟಿ - ಮಧುರಾ (ಬಿಂಬ) ಪ್ರಥಮ, ಸುಪ್ರಿಯಾ ಎಸ್. ರಾವ್ (ಕಿತ್ತೂರು ನಿರಂಜನಿ) ದ್ವಿತೀಯ, 3. ಎಚ್.ಎಸ್. ಕವಿತ (ಅಂಧ ಗಾಂಧಾರಿ) ತೃತೀಯ ಸ್ಥಾನಗಳಿಸಿದೆ.
ಶ್ರೇಷ್ಟ ಸಂಗೀತ - ಶಿವಮೊಗ್ಗದ ಅಂಚೆ ಸಾಂಸ್ಕೃತಿಕ ಬಳಗ (ಕಿತ್ತೂರು ನಿರಂಜನಿ) ಪ್ರಥಮ, ಲಾವಣ್ಯ ಬೈಂದೂರು (ಮರಣ ಮೃದಂಗ) ದ್ವಿತೀಯ, ಕಲಾಜ್ಯೋತಿ ಶಿವಮೊಗ್ಗ (ಬಿಂಬ) ತೃತೀಯ.
ಶ್ರೇಷ್ಟ ರಂಗ ಪರಿಕರ- ಹಾರಾಡಿ ಭೂಮಿಕ (ಅಗ್ನಿಲೋಕ) ಪ್ರಥಮ, ಶಿವಮೊಗ್ಗ ಅಂಚೆ ಸಾಂಸ್ಕೃತಿಕ ಬಳಗ (ಕಿತ್ತೂರು ನಿರಂಜನಿ) ದ್ವಿತೀಯ, ಕೊಡವೂರು ಸುಮನಸಾ ತಂಡ (ಎಲ್ಲರೂ ನನ್ನ ಮಕ್ಕಳೇ) ತೃತೀಯ.
ಶ್ರೇಷ್ಟ ಪ್ರಸಾದನ - ಭೂಮಿಕಾ ಹಾರಾಡಿ ಪ್ರಥಮ, ಶಿವಮೊಗ್ಗ ಅಂಚೆ ಸಾಂಸ್ಕೃತಿಕ ಬಳಗ ದ್ವಿತೀಯ, ಕಲಾಜ್ಯೋತಿ ಶಿವಮೊಗ್ಗ ತೃತೀಯ.
ಶ್ರೇಷ್ಟ ಬೆಳಕು- ಲಾವಣ್ಯ ಬೈಂದೂರು ಪ್ರಥಮ, ಶಿವಮೊಗ್ಗ ಅಂಚೆ ಸಾಂಸ್ಕೃತಿಕ ಬಳಗ ದ್ವಿತೀಯ, ಸುಮನಸಾ ಕೊಡವೂರು ತೃತೀಯ.
ಹಾಸ್ಯ ಪಾತ್ರ- ರಕ್ತಾಂಜಲಿ ನಾಟಕದ ನಟ್ಟು ಶಾಸ್ತ್ರಿ ಪಾತ್ರಧಾರಿ ಶಿವರಾಮ ಹೆಗಡೆ.