ಉಡುಪಿ: ವಾದಿರಾಜ, ಕನಕದಾಸರ ಸಂಗೀತೋತ್ಸವ ಶೋಭಾಯಾತ್ರೆ
ಉಡುಪಿ: ನಗರದ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಶುಕ್ರವಾರ ಪ್ರಾರಂಭಗೊಂಡ 36ನೇ ಶ್ರೀವಾದಿರಾಜ ಕನಕದಾಸ ಸಂಗೀತೋತ್ಸವದ ಉದ್ಘಾಟನೆಗೆ ಮುನ್ನಾ ಕಡಿಯಾಳಿ ದೇವಸ್ಥಾನದಿಂದ ಸಭಾಂಗಣದವರೆಗೆ ಶ್ರೀವಾದಿರಾಜ, ಕನಕದಾಸರ ಶೋಭಾಯಾತ್ರೆ ಜರಗಿತು.
ವಿವಿಧ ಭಜನಾ ಮಂಡಳಿಗಳ ನೂರಾರು ಮಹಿಳೆಯರು ಚಂಡೆ, ವಾದ್ಯಗಳೊಂದಿಗೆ ನಡೆದ ಈ ಶೋಭಾಯಾತ್ರೆಯನ್ನು ನಗರ ಸಭಾಧ್ಯಕ್ಷ ಯುವರಾಜ್ ಉದ್ಘಾಟಿಸಿದರು. ನಗರಸಭಾ ಸದಸ್ಯರಾದ ಪ್ರಶಾಂತ್ ಭಟ್, ಚಂದ್ರಕಾಂತ್ ನಾಯ್ಕ್, ಎಂ.ಜಿ.ಎಂ. ಕಾಲೇಜು ಪ್ರಾಚಾರ್ಯ ಪ್ರೊ.ಹಾ.ಲಾ. ನಾಯಕ್, ಪ್ರೊ. ಹೆರಂಜೆ ಕೃಷ್ಣ ಭಟ್ ಇದ್ದರು. ಮೆರವಣಿಗೆಯನ್ನು ಸಂಸ್ಕಾರ ಭಾರತಿ ಸಂಚಾಲಕ ವಾಸುದೇವ ಭಟ್ ಪೆರಂಪಳ್ಳಿ ಸಂಯೋಜಿಸಿದರು.