ಆತ್ಮರಕ್ಷಣೆಗೆ ಕರಾಟೆ ಸಹಕಾರಿ: ರಘುಪತಿ
ಬ್ರಹ್ಮವಾರ: ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದ್ದು, ಇದನ್ನು ತಡೆಯಲು ಆತ್ಮರಕ್ಷಣೆಯ ಕಲೆ ಕರಾಟೆ ಬಹಳ ಸಹಕಾರಿ ಎಂದು ಹಿರಿಯ ಕರಾಟೆ ತರಬೇತುದಾರ ರಘುಪತಿ ಬ್ರಹ್ಮಾವರ ಹೇಳಿದ್ದಾರೆ. ಬ್ರಹ್ಮಾವರದ ಸರ್ಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಆರಂಭವಾದ ಕರಾಟೆ ತರಗತಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರಾಂಶುಪಾಲೆ ತಾರಾದೇವಿ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ಬಿ. ಟಿ. ನಾಯ್ಕ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಎಸ್. ನಾರಾಯಣ್, ರಾಷ್ಟ್ರ ಮಟ್ಟದ ಕರಾಟೆಪಟು ಕಾತ್ಯಾಯಿನಿ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಸುಶೀಲಾ ಸ್ವಾಗತಿಸಿದರು. ಉಷಾ ಬಾಯಿ ವಂದಿಸಿದರು.