ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮತಾಂತರಕ್ಕೆ ಯತ್ನ; ಮಹಿಳೆಯರಿಬ್ಬರು ಪೊಲೀಸ್ ವಶಕ್ಕೆ

Mainashree
Updated On : 11 Dec 2013, 10:18 am

ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಕಲಂಬಾಡಿ ಪದವು ಎಂಬಲ್ಲಿನ ನಿವಾಸಿ ಅಮರವಾಣಿ ನಾಗೇಶ್ ಸುವರ್ಣ ಎಂಬವರ ಮನೆಗೆ ಇಬ್ಬರು ಮಹಿಳೆಯರು ಕ್ರೈಸ್ತ ಮತಕ್ಕೆ ಮತಾಂತರ ನಡೆಸುವ ಪ್ರಯತ್ನದಲ್ಲಿರುವುದನ್ನು ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ತಡೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಬಡ ಹಿಂದೂ ಧರ್ಮದವರ ಮನೆಗಳನ್ನು ಹುಡುಕಿ ಹೋಗುತ್ತಿರುವ ಈ ಇಬ್ಬರು ಮಹಿಳೆಯರನ್ನು ಗಮನಿಸಿದ ಅಮರವಾಣಿ ನಾಗೇಶ್ ಸುವರ್ಣ, ಬಜರಂಗದಳ ಹಾಗೂ ಇತರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಸಂಪರ್ಕಿಸಿದರು. ಸ್ಥಳಕ್ಕಾಮಿಸಿದ ಕಾರ್ಯಕರ್ತರು ಮತಾಂತರಕ್ಕೆ ಪ್ರಯತ್ನಿಸಿದ ಮಹಿಳೆಯರನ್ನು ಗ್ರಾಮಾಂತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement