ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿದ್ಯುತ್ ಅನಧಿಕೃತ ಸಂಪರ್ಕ: ಮೆಸ್ಕಾಂ ಎಂಜಿನಿಯರ್ ವಿರುದ್ಧವೂ ತನಿಖೆ

Mainashree
Updated On : 11 Dec 2013, 10:18 am

ಮಂಗಳೂರು: ಕೆಎಂಸಿ ಡೆಂಟಲ್ ಕಾಲೇಜ್ ಮತ್ತು ಮಣಿಪಾಲ ಶಾಲೆಗೆ ಅನಧಿಕೃತ ಸಂಪರ್ಕ ನೀಡಿಕೆಯಲ್ಲಿ ಮೆಸ್ಕಾಂ ಅಧಿಕಾರಿಗಳು ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೆಸ್ಕಾಂ ಜಾಗೃತ ದಳ ಎಸ್ಪಿ ಪಿ.ಹರಿಶ್ಚಂದ್ರ ಹೇಳಿದರು.
 ಕೆಎಂಸಿ ಆಸ್ಪತ್ರೆ ಮೂರು ಬಾರಿ ಹೆಚ್ಚುವರಿ ವಿದ್ಯುತ್ ಸಂಪರ್ಕ ಪಡೆದಿತ್ತು. ಆ ರೀತಿ ಕಾನೂನಿನಲ್ಲಿ ಅವರಿಗೆ ಅವಕಾಶ ಇದೆ. ಬಳಸಿದ ವಿದ್ಯುತ್‌ಗೆ ಬಿಲ್ ಕೂಡಾ ಪಾವತಿ ಮಾಡಿದ್ದಾರೆ. ಆದರೆ ದಂತವೈದ್ಯಕೀಯ ಕಾಲೇಜ್ ಅನಧಿಕೃತ ಕಟ್ಟಡ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಅನಧಿಕೃತವಾಗಿದೆ. ಮೆಸ್ಕಾಂಗೆ ಈ ವಿಚಾರ ತಿಳಿದಿತ್ತು ಎಂದು ಕೆಎಂಸಿ ಹೇಳಿದೆ. ಬಿಲ್ ನೀಡುವಾಗ ಕಾರ್ಯಕಾರಿ ಎಂಜಿನಿಯರ್ ಪರಿಶೀಲನೆ ನಡೆಸಬೇಕು. 2006ರಿಂದ ಇದುವರೆಗೆ ಗೊತ್ತಾಗದಿರುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
 ಅನಧಿಕೃತ ವಿದ್ಯುತ್ ಬಳಸಿದರೆ ಅದಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಹೆಚ್‌ಟಿ ಸಂಪರ್ಕದಲ್ಲಿ ಮೂರು ತಿಂಗಳ ಕಾಲ ಅವಕಾಶ ನೀಡಲಾಗುತ್ತದೆ. ಬಳಿಕ ವಿದ್ಯುತ್ ಸಂಪರ್ಕ ಕಡಿತಗೊಳಿಸಬಹುದು. ದಂಡ ಪ್ರಶ್ನಿಸಿ ಕೋರ್ಟ್‌ಗೆ ಹೋಗುವಂತಿಲ್ಲ. ಇಲಾಖೆಯಲ್ಲಿಯೇ ಮೇಲ್ಮನವಿ ಸಲ್ಲಿಸಬಹುದು. ಆದರೂ ದಂಡ ವಿಧಿಸಿದ್ದು ತಪ್ಪು ಎಂದು ವಾದಿಸುವಂತಿಲ್ಲ. ದಂಡ ಲೆಕ್ಕಾಚಾರ ಪ್ರಮಾಣದಲ್ಲಿ ನ್ಯೂನತೆ ಇದ್ದರೆ ಹೇಳಬಹುದು ಎಂದರು.
ಈ ರೀತಿ ವಿದ್ಯುತ್ ದುರುಪಯೋಗ ಇದ್ದರೆ ಪೊಲೀಸ್ ಅಧೀಕ್ಷಕರ ಮೊಬೈಲ್ ಸಂಖ್ಯೆ 9480833069 ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ವಿನಯ್ ಎ. ಗಾಂವ್ಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement