ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಶ್ರೇಷ್ಠ ಜೀವನ ರೂಪಿಸಿ: ಕಾಳಹಸ್ತೇಂದ್ರ ಶ್ರೀ

Lingaraj Badiger
Updated On : 17 Dec 2013, 12:20 pm

ಉಡುಪಿ: ಮನುಷ್ಯನಾಗಿ ಹುಟ್ಟುವುದು ಮುಖ್ಯವಲ್ಲ, ಮನುಷ್ಯತ್ವವನ್ನು ಜೀವನದುದ್ದಕ್ಕೂ ಅಳವಡಿಸಿ ಶ್ರೇಷ್ಠ ಜೀವನ ರೂಪಿಸಿಕೊಳ್ಳುವುದು ಮುಖ್ಯ ಎಂದು ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ಜರುಗಿದ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಸದಾಶಿವ ಎ. ಆಚಾರ್ಯ ಪಡು ಕುತ್ಯಾರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಟಪಾಡಿ ಗ್ರಾ.ಪಂ. ಅಧ್ಯಕ್ಷ ವಿನಯ ಬಲ್ಲಾಳ್, ಎಲ್ಲೂರು ಗ್ರಾಮ ಮೊಕ್ತೇಸರ ವೈ.ವಿ. ಉಮೇಶ ಆಚಾರ್ಯ ಎಲ್ಲೂರು, ಬೆಳ್ಮಣ್ಣು ಗ್ರಾಮ ಮೊಕ್ತೇಸರ ವಾಸುದೇವ ಆಚಾರ್ಯ ಇದ್ದರು. ಎನ್. ಕೃಷ್ಣ ಆಚಾರ್ಯ ಉದ್ಯಾವರ ಸ್ವಾಗತಿಸಿದರು. ಸುರೇಶ ಆಚಾರ್ಯ ಕಟಪಾಡಿ ವಂದಿಸಿದರು.
ಈ ಸಂದರ್ಭ ವಿಶ್ವಕರ್ಮ ಸಮಾಜದ 14 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. 25 ವರ್ಷಕ್ಕೂ ಮಿಕ್ಕಿ ಸೇವೆ ಸಲ್ಲಿಸಿದ 20 ಗ್ರಾಮ ಮೊಕ್ತೇಸರರನ್ನು ಗೌರವಿಸಲಾಯಿತು.
 ದೇವಾಲಯ ಶಿಲ್ಪಿ ದಿನೇಶ ಆಚಾರ್ಯ ಪಡುಬಿದ್ರಿ ಅವರನ್ನು ಸನ್ಮಾನಿಸಲಾಯಿತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement