ಕಾರ್ಕಳ ಸರ್ಕಾರಿ ಆಸ್ಪತ್ರೆ, ಮಿಯ್ಯಾರು ಕಂಬಳ ಗದ್ದೆಗೆ ರು. 1.25 ಕೋಟಿ
ಕಾರ್ಕಳ: ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವ ಡಾ.ಎಂ. ವೀರಪ್ಪ ಮೊಯ್ಲಿ ಶಿಫಾರಸಿನಂತೆ, ತೈಲ ಕಂಪನಿಗಳು ಕಾರ್ಕಳ ಸರಕಾರಿ ಆಸ್ಪತ್ರೆಗೆ ರು. 98.00 ಲಕ್ಷ ಹಾಗೂ ಮಿಯ್ಯಾರು ಕಂಬಳ ಗದ್ದೆಗೆ ರು. 25 ಲಕ್ಷ ಅನುದಾನ ಬಿಡುಗಡೆಗೊಳಿಸಿವೆ.
ಡಿ.22ರಂದು ಡಾ.ಎಂ. ವೀರಪ್ಪ ಮೊಯ್ಲಿ ಈ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿರುವರು ಎಂದು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸುಸಜ್ಜಿತ ಪುರಭವನ ನಿರ್ಮಾಣಕ್ಕೆ ಈಗಾಗಲೇ ರು. 2 ಕೋಟಿ ಅಂದಾಜುಪಟ್ಟಿ ತಯಾರಿಸಿದ್ದು, ಈ ಕಾಮಗಾರಿಗೂ ಅತೀ ಶೀಘ್ರದಲ್ಲಿ ಹಣ ಬಿಡುಗಡೆಯಾಗುವ ಹಂತದಲ್ಲಿದೆ ಎಂದು ಗೋಪಾಲ ಭಂಡಾರಿ ತಿಳಿಸಿದ್ದಾರೆ.