27ರಿಂದ ವಿಶೇಷ ವಿಚಾರಸಂಕಿರಣ
ಮಣಿಪಾಲ: ಜಿಲ್ಲಾಡಳಿತ ವತಿಯಿಂದ ಜನತೆ ಮತ್ತು ಜಿಲ್ಲಾಡಳಿತ ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಗುರುತಿಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡುವ ಉದ್ದೇಶದಿಂದ 27ರಿಂದ 29ರವರೆಗೆ 'ಉಡುಪಿ 360 ಡಿಗ್ರಿ' ವಿಶೇಷ ವಿಚಾರಸಂಕಿರಣ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ. ರೇಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 27ರಂದು ಬೆಳಗ್ಗೆ 11 ಗಂಟೆಗೆ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಶಾಸಕ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6 ಗಂಟೆಗೆ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಅವರು 'ಅಭಿವೃದ್ಧಿ- ಮಾತು ಮತ್ತು ಕೃತಿ' ಬಗ್ಗೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. 27ರಂದು ಮಧ್ಯಾಹ್ನ 'ಸಾಮಾನ್ಯ ಸಂಪತ್ತು', 28ರಂದು ಬೆಳಗ್ಗೆ 'ಮೂಲ ಸೌಕರ್ಯಗಳು ಸಾಧ್ಯತೆ, ಅಭಿವೃದ್ಧಿ'
, ಮಧ್ಯಾಹ್ನ 'ಪರಿಸರ', 29ರಂದು ಬೆಳಗ್ಗೆ 'ಸರ್ವರ ಸಹಭಾಗಿತ್ವ' ಮತ್ತು ಮಧ್ಯಾಹ್ನ 'ಕೃಷಿ, ಕೈಗಾರಿಕೆ ಮತ್ತು ಸೇವಾ ಕ್ಷೇತ್ರ' ಕಾರ್ಯಾಗಾರಗಳು ನಡೆಯಲಿವೆ ಎಂದರು. ಅಪರ ಜಿಲ್ಲಾಧಿಕಾರಿ ಕುಮಾರ್ ಇದ್ದರು.