ಪ್ರತಿಭಾ ಕಾರಂಜಿ: ಅಲೆವೂರು ಶಾಲೆಗೆ ಪ್ರಶಸ್ತಿ
ಉಡುಪಿ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬ್ರಹ್ಮಾವರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅಲೆವೂರಿನ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆ ನಾಲ್ಕು ಪ್ರಥಮ ಬಹುಮಾನಗಳನ್ನು ಪಡೆದಿದೆ. ವೀಕ್ಷಣ್ ಆಚಾರ್ಯ (ತುಳು ಕಂಠ ಪಾಠ- ಪ್ರಾಥಮಿಕ ಶಾಲಾ ವಿಭಾಗ), ಸ್ವಾತಿ ನಾಯಕ್ ಧಾರ್ಮಿಕ ಪಠಣ (ಹಿರಿಯ ಪ್ರಾಥಮಿಕ ವಿಭಾಗ), ಪ್ರತೀಕ್ಷಾ ಆಚಾರ್ಯ ಛದ್ಮವೇಷ (ಹಿರಿಯ ಪ್ರಾಥಮಿಕ ವಿಭಾಗ) ಮತ್ತು ಶ್ರೇಯಾ ಕುಲಾಲ್ ತುಳು ಕಂಠ ಪಾಠ ( ಹಿರಿಯ ಪ್ರಾಥಮಿಕ ವಿಭಾಗ).