ಕುಂದಾಪುರ: ಕ್ರಿಸ್‌ಮಸ್ ಆಚರಣೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್
ಕುಂದಾಪುರ: ಕುಂದಾಪುರ ರೊಜರಿ ಮಾತೆ ಇಗರ್ಜಿಯಲ್ಲಿ ಮಂಗಳವಾರ ಮಧ್ಯರಾತ್ರಿ ರಾಜ್ಯ ಆರೋಗ್ಯ ಮಂತ್ರಿ ಯು.ಟಿ. ಖಾದರ್ ಕ್ರೈಸ್ತ ಬಾಂಧವರೊಂದಿಗೆ ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಭಾಗಿಯಾದರು.
ಈ ವೇಳೆ ಮಾತನಾಡಿದ ಖಾದರ್, ಹಿರಿಯರಿಂದ ನಾವು ಕಲಿಯಬೇಕಾದ್ದು ಬೇಕಾದಷ್ಟಿದೆ, ಯುವ ಜನಾಂಗ ಹಿರಿಯರು ಮಾಡಿದ ತ್ಯಾಗ, ಶ್ರಮ, ಶ್ರದ್ಧೆಗಳನ್ನು ನೆನಪಿಟ್ಟುಕೊಳ್ಳಬೇಕು. ಕಾರು, ಬಂಗ್ಲೆ, ದುಡ್ಡು, ಚಿನ್ನ ನಿಜವಾದ ಆಸ್ತಿಯಲ್ಲ, ಒಳ್ಳೆಯ ಗುಣ- ನಡತೆ ನಿಜವಾದ ಆಸ್ತಿ. ಹಾಗಾಗಿ ನಾವು ಶಾಂತಿ, ಸಹೋದರತ್ವದಿಂದ ಬಾಳಿ ಒಳ್ಳೆಯ ಸಮಾಜ ಕಟ್ಟೋಣ ಎಂದು ಸಂದೇಶ ನೀಡಿದರು.
ಇಗರ್ಜಿ ಧರ್ಮಗುರು ಅನಿಲ್ ಡಿಸೋಜಾ, ಕುಂದಾಪುರ ಸಂತ ಮೇರಿಸ್ ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್, ಧರ್ಮಗುರು ಲಿಯೊ ಡಿಸೋಜಾ ಇದ್ದರು.