ಬಿಬಿಎಂ ನವೀಕೃತ ಪಠ್ಯ ಕಾರ್ಯಾಗಾರ
ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಮಂಗಳೂರು ವಿವಿ ಬಿಬಿಎಂ ಪ್ರಾಧ್ಯಾಪಕರ ವೇದಿಕೆ ಜಂಟಿಯಾಗಿ ಆಯೋಜಿಸಿದ ಮಂಗಳೂರು ವಿವಿ ಬಿಬಿಎಂ ನಾಲ್ಕನೇ ಸೆಮಿಸ್ಟರ್ ನವೀಕೃತ ಪಠ್ಯ ಕಾರ್ಯಾಗಾರವು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಇತ್ತೀಚೆಗೆ ನಡೆಯಿತು.
ಉಡುಪಿಯ ಶ್ರೀ ಅದಮಾರು ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ವಿಶ್ವಪ್ರಿಯ ತೀರ್ಥರು ಕಾರ್ಯಗಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕಾಲೇಜಿನ ಕಾರ್ಯದರ್ಶಿ ಡಾ.ಜಿ.ಎಸ್. ಚಂದ್ರಶೇಖರ್, ಪಿಐಎಂ ನಿರ್ದೇಶಕ ಡಾ.ಎಂ.ಆರ್. ಹೆಗಡೆ, ಪ್ರಾಂಶುಪಾಲ ಕೆ. ಸದಾಶಿವ ರಾವ್, ಮಂಗಳೂರು ವಿವಿ ಬಿಬಿಎಂ ಬೋಧಕರ ವೇದಿಕೆಯ ಕಾರ್ಯದರ್ಶಿ ಅಬೂಬಕರ್ ಸಿದ್ದಕಿ, ಸಹ ಕಾರ್ಯದರ್ಶಿ ನಮಿತಾ, ಉಪಾಧ್ಯಕ್ಷ ನಂದಕಿಶೋರ್ ಇದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಸತ್ಯನಾರಾಯಣ ಸ್ವಾಗತಿಸಿದರು. ಮೀನಾಕ್ಷಿ ಮತ್ತು ಪ್ರತಿಮಾ ಶೆಟ್ಟಿ ನಿರೂಪಿಸಿ ಸುದೇಶ್ ಪೂಜಾರಿ ವಂದಿಸಿದರು.
ಕಾರ್ಯಗಾರದಲ್ಲಿ ಮಂಗಳೂರು ವಿವಿ ವ್ಯಾಪ್ತಿಯ ಸುಮಾರು 250ಕ್ಕೂ ಹೆಚ್ಚಿನ ಪ್ರಾಧ್ಯಾಪಕರು ಭಾಗವಹಿಸಿದ್ದರು.