ಭಾರತ್ ನಿರ್ಮಾಣ ಸ್ವಯಂ ಸೇವಕರ ಚಿಂತನಾ ಕಾರ್ಯಾಗಾರ
ಉಡುಪಿ: ಇಲ್ಲಿನ ತಾ.ಪಂ. ಸಭಾಭವನದಲ್ಲಿ ಭಾರತ್ ನಿರ್ಮಾಣ್ ಸ್ವಯಂ ಸೇವಕರ ಚಿಂತನಾ ಕಾರ್ಯಾಗಾರ ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ನಡೆಯಿತು.
ಸಭೆಯಲ್ಲಿ 'ನವಭಾರತ ನಿರ್ಮಾಣ ವೇದಿಕೆ ಉಡುಪಿ ತಾಲೂಕು' ಹೆಸರಿನ ವೇದಿಕೆ ರಚಿಸಲಾಯಿತು. ಮಲ್ಲಿಕಾ ಬಿ. ಪೂಜಾರಿ ಐರೋಡಿ ಅಧ್ಯಕ್ಷರನ್ನಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ರಾಮರಾಯ ಪಾಟ್ಕರ್ ಶಿರ್ವ ಹಾಗೂ ದಿನೇಶ್ ಕೋಟ್ಯಾನ್ ಪಲಿಮಾರು, ಪ್ರಧಾನ ಕಾರ್ಯದರ್ಶಿಯಾಗಿ
ರಾಜೇಶ್ ದೇವಾಡಿಗ ಪಡುಬಿದ್ರಿ, ಜೊತೆ ಕಾರ್ಯದರ್ಶಿಯಾಗಿ ಹರೀಶ್ ಸೇರ್ವೆಗಾರ್ ಪೆರ್ಡೂರು ಹಾಗೂ ಶಕೀರ್ ಎಂ.ಕೆಮ್ಮಣ್ಣು, ಕೋಶಾಧಿಕಾರಿಯಾಗಿ ಹರೀಶ್ ಕಿಣಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೇಮಲತಾ ವಾರಂಬಳ್ಳಿ, ನಾಗೇಶ್ ಸುವರ್ಣ ಕಾಪು, ರಾಜೀವ ಕುಲಾಲ್ ಕುಂಜಾಲು, ಸುಮಲತಾ ಇನ್ನಂಜೆ, ಇಬ್ರಾಹಿಂ ಸನಾ ಹೆಜಮಾಡಿ, ಗೌರಿ ಪೂಜಾರಿ ಬಾರ್ಕೂರು, ಪ್ರಭಾ ಶೆಟ್ಟಿ ಕಟಪಾಡಿ, ಲಿಲ್ಲಿ ಕಾಸ್ಟಲಿನೋ ಕುರ್ಕಾಲುನ್ನು ಆಯ್ಕೆ ಮಾಡಲಾಯಿತು.