ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಯೇಸು ನಮ್ಮೆಲ್ಲರ ಹೃದಯದಲ್ಲಿ ಇರಬೇಕು: ಡಾ. ಐಸಾಕ್ ಲೋಬೊ

Vishwanath S
Updated On : 26 Dec 2013, 11:31 am

ಉಡುಪಿ: ಯೇಸು ದೇವರು ನೆಮ್ಮೆಲ್ಲರ ಹೃದಯಗಳಲ್ಲಿ ಜನ್ಮ ತಾಳಬೇಕೇ ವಿನಾ ನಾವು ನಿರ್ಮಿಸುವ ಕೃತಕ ಗೋದಲಿಗಳಲ್ಲಿ ಅಲ್ಲ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಕ್ರಿಸ್‌ಮಸ್ ಅಂಗವಾಗಿ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಿ ಕ್ರಿಸ್‌ಮಸ್ ಸಂದೇಶವನ್ನು ನೀಡಿದರು. ಯೇಸು ಸ್ವಾಮಿಯು ಬಡ ಮಗನಾಗಿ ಗೋದಲಿಯಲ್ಲಿ ಜನಿಸಿದ್ದು ಮಾತ್ರವಲ್ಲದೆ ಜೀವನದುದ್ದಕ್ಕೂ ಸರಳತೆ, ಪ್ರೀತಿ, ಸಮಾಧಾನದ ಸಂದೇಶವನ್ನು ಜಗತ್ತಿಗೆ ಬೋಧಿಸಿದರು. ವಿಶ್ವಾಸ ಹಾಗೂ ಪ್ರೀತಿಯ ಮೂಲಕ ಶಾಂತಿಯ ದೂತರಾಗೋಣ ಎಂದು ಕರೆ ನೀಡಿದರು.
ಚರ್ಚಿನ ವಠಾರದಲ್ಲಿ ಯೇಸುವಿನ ಜನನದ ಸಂದೇಶವನ್ನು ಸಾರುವ ಬೃಹತ್ ಆಕಾರದ ಗೋದಲಿಗಳು ಪ್ರಮುಖ ಆಕರ್ಷಣೆಯಾಗಿತ್ತು. ಚರ್ಚ್‌ಗಳಲ್ಲಿ ಬಲಿಪೂಜೆಯ ಬಳಿಕ ಕ್ರೈಸ್ತ ಬಾಂಧವರು ಪರಸ್ಪರ ಕ್ರಿಸ್‌ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement