ಹೆರ್ಮುಂಡೆ: ಅಜೆಕಾರು ಕ್ಲಸ್ಟರ್ ಮಟ್ಟದ ಕಲಿಕೋತ್ಸವ
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶದಂತೆ ಅಜೆಕಾರು ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಹೆರ್ಮುಂಡೆ ಸ.ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ಜರುಗಿತು. ಗ್ರಾಪಂ ಅಧ್ಯಕ್ಷೆ ಹೀರಾ ಶೆಟ್ಟಿ ಉದ್ಘಾಟಿಸಿದರು. ಜಗದೀಶ್ ಬೋಳಾರ್, ಉದಯ ನಾಯಕ್, ಸತೀಶ್ ಹೆಗ್ಡೆ, ಮುಖ್ಯ ಶಿಕ್ಷಕ ಶ್ರೀಕಾಂತ್ ಭಟ್ ಇದ್ದರು.
ಪ್ರತಿಭಾ ಕಾರಂಜಿ ಸ್ಪರ್ಧೆ
ಕುಂದಾಪುರ: ಬಿದ್ಕಲ್ ಕಟ್ಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಜರಗಿತು. ಹಾರ್ದಳ್ಳಿ- ಮಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮಿ ಜನಾರ್ದನ್ ಭಟ್ ಸೌಡ, ಸ್ವಸಹಾಯ ಸಂಘದ ಅಧ್ಯಕ್ಷೆ ರೇಖಾ, ಎಸ್‌ಡಿಎಂಸಿ ಉಪಾಧ್ಯಕ್ಷೆ ವಾಣಿ ಐತಾಳ್, ವಸುಮತಿ ಶೆಡ್ತಿ, ಯುವಕ ಮಂಡಲದ ಅಧ್ಯಕ್ಷ ಉದಯ ಐತಾಳ್ ಇದ್ದರು.
ವ್ಯಕ್ತಿತ್ವ ವಿಕಸನ ಶಿಬಿರ
ಮಲ್ಪೆ: ಮಕ್ಕಳಿಗೆ ಪಾಠದೊಂದಿಗೆ ವ್ಯಕ್ತಿತ್ವ ನಿರ್ಮಾಣವಾಗುವಂತಹ ವಾತಾವರಣ ಮೂಡಿಸಬೇಕು. ಆ ಮೂಲಕ ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯವಾಗುತ್ತದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯಿನಿ ಸುಲೋಚನಾ ಕೊಡವೂರು ಅಭಿಪ್ರಾಯಪಟ್ಟರು. ಇತ್ತೀಚೆಗೆ ಮಲ್ಪೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಅವರು ಮಾತನಾಡಿದರು. ಎಸ್.ಎ. ಭಂಡಾರ್ಕರ್ ನೇತೃತ್ವದ ಇಂಡಿಯಾ ನೌ ಫೌಂಡೇಶನ್ ವತಿಯಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು. ಮಲ್ಪೆ- ಕೋಡವೂರು ರೋಟರಿ ಅಧ್ಯಕ್ಷೆ ಪೂರ್ಣಿಮ ಜನಾರ್ದನ್ ಸ್ವಾಗತಿಸಿದರು. ರೋಟರಿ ವಲಯ 2ರ ಸ. ಗವರ್ನರ್ ಎಂ. ಮಹೇಶ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ, ಇಂಟರ್ಯಾಕ್ಟ್ ಅಧ್ಯಕ್ಷೆ ಅನಿಷಾ, ಸಂಯೋಜಕ ವಿಷ್ಣು ಗೌಡ ಇದ್ದರು.
ಉಡುಪಿ: ಹಿಂದಿ ಕಾರ್ಯಾಗಾರ
ಉಡುಪಿ: ಕಾರ್ಪೊರೇಶನ್ ಬ್ಯಾಂಕ್ ಉಡುಪಿ ವಲಯ ಕಚೇರಿ ವ್ಯಾಪ್ತಿಯ ಶಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗೆ ಹಿಂದಿ ಕಾರ್ಯಾಗಾರ ಬ್ಯಾಂಕ್‌ನ ಹಾಜಿ ಅಬ್ದುಲ್ಲಾ ಸ್ಮಾರಕ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಸಹಾಯಕ ಮಹಾ ಪ್ರಬಂಧಕ ವಿ.ಎನ್. ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ, ಬ್ಯಾಂಕ್‌ನ ದೈನಂದಿನ ವ್ಯವಹಾರದಲ್ಲಿ ಹಿಂದಿ ಬಳಕೆ ಮಾಡುವಂತೆ ಸಿಬ್ಬಂದಿಗೆ ಕರೆ ನೀಡಿದರು. ವಲಯ ಕಚೇರಿಯ ಹಿಂದಿ ಪ್ರಬಂಧಕಿ ಬಿನು ಟಿ.ಎಸ್., ಬ್ಯಾಂಕಿಂಗ್ ವ್ಯವಹಾರದಲ್ಲಿ ಸಾಮಾನ್ಯವಾಗಿ ಬಳಸುವ ಶಬ್ದಾವಳಿಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಹಿಂದಿಯಲ್ಲಿ ಟಿಪ್ಪಣಿ ಬರೆಯುವುದರ ಬಗ್ಗೆ ಮಾರ್ಗದರ್ಶನ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸಿಂಡಿಕೇಟ್ ಬ್ಯಾಂಕ್‌ನ ರಾಜಭಾಷಾ ಅಧಿಕಾರಿ ಪ್ರಶಾಂತ್ ಜಿ. ಪೈ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಮಾಧವಿ ಭಂಡಾರಿ ಭಾಗವಹಿಸಿದ್ದರು. ವಲಯ ಕಚೇರಿಯ ಮುಖ್ಯ ಪ್ರಬಂಧಕ ಹಂಸಧ್ವಜ ಆರ್. ಸ್ವಾಗತಿಸಿದರು.
ನೈತಿಕ ಶಿಕ್ಷಣ- ಉಪನ್ಯಾಸ
ಉಡುಪಿ: ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ಆಧಾರಿತ ಉಪನ್ಯಾಸ ಹಾಗೂ ದಾರಿದೀಪ ಮತ್ತು ಬಾಳಬೆಳಕು ಪುಸ್ತಕ ವಿತರಣೆಯ 100ನೇ ಕಾರ್ಯಕ್ರಮ ಇಲ್ಲಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.
ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ರಾಧಾಮಣಿ ಡಿ.ಎಸ್, ಬಡಗುಬೆಟ್ಟು ಸೊಸೈಟಿಯ ಪ್ರಬಂಧಕ ಇಂದ್ರಾಳಿ ಜಯಕರ ಶೆಟ್ಟಿ, ಯಕ್ಷ ಶಿಕ್ಷಣ ಟ್ರಸ್ಟಿನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್, ನಿವೃತ್ತ ಪ್ರಾಂಶುಪಾಲ ಪಿ. ವಾಸುದೇವ ರಾವ್, ಉದ್ಯಮಿ ವಿಶ್ವನಾಥ ಶೆಣೈ ಇದ್ದರು.ಗಿರಿಜಾ ತಲ್ಲೂರು ಸ್ವಾಗತಿಸಿದರು. ವೀಣಾ ಬಾಯರಿ ನಿರೂಪಿಸಿ, ಸುನಿಲ್ ಕುಮಾರ್ ಶೆಟ್ಟಿ ವಂದಿಸಿದರು.
ಕ್ರೀಡಾಕೂಟ ಉದ್ಘಾಟನೆ
ಹೆಬ್ರಿ: ಮುದ್ರಾಡಿಯ ಎಮ್.ಎನ್.ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟವನ್ನು ಡಾ. ಎಂ.ಎಸ್. ರಾವ್ ಉದ್ಘಾಟಿಸಿ, ಮಾತನಾಡಿದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಾಯರಿ, ಸಹಶಿಕ್ಷಕ ಮಹೇಶ್ ಎನ್.ಕೆ., ಪಿ.ವಿ. ಆನಂದ, ಶ್ಯಾಮಲಾ, ಶ್ರೀದೇವಿ, ಸುಜಾತ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.