ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

'ಉತ್ತಮ ಆಡಳಿತ ನೀಡುವ ಸರ್ಕಾರ ಆಯ್ಕೆ ಮಾಡಿ'

Vishwanath S
Updated On : 28 Dec 2013, 11:29 am

ಮಣಿಪಾಲ: ಜನರ ಸಮಸ್ಯೆಗಳು ಸರಿಯಾಗಿ ಮತ್ತು ಕ್ಲಪ್ತವಾಗಿ ಬಗೆಹರಿಯಬೇಕಾದರೆ, ಜನ ಉತ್ತಮ ಆಡಳಿತ ನೀಡುವ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಬೇಕು ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.
ಅವರು ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ನಡೆದ 'ಉಡುಪಿ 360 ಡಿಗ್ರಿ' ಎಂಬ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜನರು ವೃದ್ಧಾಪ್ಯ ವೇತನ, ಸಹಾಯಧನ ಸಾಲ ಪಡೆದುಕೊಳ್ಳಬೇಕಾದರೆ ಯಾವೆಲ್ಲಾ ದಾಖಲೆಗಳನ್ನು ಕೊಡಬೇಕು ಎಂಬ ಪಟ್ಟಿಯನ್ನು ಪಂಚಾಯತ್‌ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಕೊಡುವಂತಹ ವ್ಯವಸ್ಥೆ ಮಾಡಬೇಕು, ಇದರಿಂದ ಜನರು ನಿತ್ಯ ಅನೇಕ ಕಚೇರಿಗಳಿಗೆ ಬರುವುದನ್ನು ತಪ್ಪಿಸಬಹುದು ಎಂದು ಹೇಳಿದರು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ನಮ್ಮಲ್ಲಿರುವ ಪ್ರಾಕೃತಿಕ, ಮಾನವ, ಜಲ, ವಿದ್ಯಾ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅದು ಬಹಳ ದೊಡ್ಡ ಕೊಡುಗೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾಧಿಕಾರಿ ಡಾ. ಎಂ.ಟಿ. ರೇಜು, ಜಿಲ್ಲೆಯಲ್ಲಿ ಇನ್ನೂ ಭರ್ತಿಯಾಗದೇ ಇರುವ ಪಿಡಿಒ, ಪೊಲೀಸ್ ಪೇದೆ, ಸವೇಯರ್ ಹುದ್ದೆಗಳನ್ನು ಭರ್ತಿಗೊಳಿಸುವುದು, ಸುಳ್ಳು ಅರ್ಜಿಗಳನ್ನು ನೀಡಿದವರಿಗೆ ದಂಡ ಹಾಕುವುದು, ಪಂಚಾಯಿತ್ ಮತ್ತು ನಗರಸಭೆಗಳ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಭೂಮಿ ಬಗ್ಗೆ ಮಾಹಿತಿ ನೀಡುವುದುತಾಲೂಕಿನಲ್ಲಿ ಜನಸ್ನೇಹಿ ಕ್ರೇಂದ್ರಗಳನ್ನು ಸ್ಥಾಪಿಸುವುದು ಹೀಗೆ 10 ಉದ್ದೇಶಗಳನ್ನಿಟ್ಟುಕೊಂಡು ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಇದರ ಮೂಲಕ ಜನರಿಂದ ಬಂದಂತಹ ಅರ್ಜಿಗಳನ್ನು ವೇಗವಾಗಿ ವಿಲೇವಾರಿ ಮಾಡಿ, ಜನರ ಸಮಸೈಗಳಿಗೆ ಶ್ರೀಘ್ರವಾಗಿ ಸ್ಪಂದಿಸಲು ನೆರವಾಗುತ್ತದೆ ಎಂದರು.   
ಅಧ್ಯಕ್ಷತೆಯನ್ನು ಜಿಪಂ ಉಪಾಧ್ಯಕ್ಷೆ ಮಮತಾ ಆರ್. ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಪಂ ಉಪಾಧ್ಯಕ್ಷ ರಾಮ ಕುಲಾಲ್, ಜಿಪಂ ಮು.ಕಾ.ನಿ. ಅಧಿಕಾರಿ ಎಸ್.ಎ. ಪ್ರಭಾಕರ ಶರ್ಮ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಕುಮಾರ್ ಸ್ವಾಗತಿಸಿದರು. ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ನಿರೂಪಿಸಿದರು.
ಜನಪ್ರತಿನಿಧಿಗಳ ಗೈರು
ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಲು, ಮಾರ್ಗದರ್ಶಿ ಸೂತ್ರಗಳನ್ನು ನಿರೂಪಿಸಲು, ಜಿಲ್ಲಾಡಳಿತ ಅತ್ಯಂತ ಮುತುವರ್ಜಿಯಿಂದ ಆಯೋಜಿಸಿರುವ ಈ ಕಾರ್ಯಾಗಾರದಲ್ಲಿ ಜಿಲ್ಲೆಯ 5 ಮಂದಿ ಶಾಸಕರಲ್ಲಿ ಇಬ್ಬರು ಮಾತ್ರ ಹಾಜರಿದ್ದರು, 3 ಮಂದಿ ಶಾಸಕರು, ಜಿಪಂ, ತಾಪಂ ಅಧ್ಯಕ್ಷರು, ಸಾಕಷ್ಟು ಮಂದಿ ಜಿಪಂ, ತಾಪಂ ಸದಸ್ಯರು ಗೈರು ಹಾಜರಾಗಿದ್ದುದು ಎದ್ದು ಕಾಣುತ್ತಿತ್ತು. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕಾಳಜಿ ತೋರಿಸುತ್ತಿತ್ತು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement