ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿದ್ಯಾರ್ಥಿಗಳ ಅಪಹರಿಸಿ ಬ್ಲೂ ಫಿಲಂ ದಂಧೆ: ಖಂಡನೆ

Vishwanath S
Updated On : 28 Dec 2013, 11:29 am

ಕಾರ್ಕಳ: ದೇಶಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಂತ ವಿಷಯಗಳ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೆ ಬುದ್ಧಿವಂತರ ನಾಡು ಎಂದೇ ಖ್ಯಾತಿ ಪಡೆದಿರುವ ದ.ಕ ಜಿಲ್ಲೆಯ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಅಪಹರಿಸಿ ಬಲತ್ಕಾರವಾಗಿ ಬ್ಲೂ ಫಿಲಂ ದಂಧೆಯನ್ನು ನಡೆಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ ಎಂದು ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮಹಿಳಾ ಮೋರ್ಚಾ, ಈ ದಂಧೆಯಲ್ಲಿ ತೊಡಗಿರುವವರು ಯಾವೂದೋ ರಾಜಕೀಯ ಪಕ್ಷದ ಆಶ್ರಯ ಪಡೆದು ಇಂತಹ ಹೇಯ ಕೃತ್ಯವೆಸಗಲು ಮುಂದಾಗಿದ್ದು ಮಹಿಳಾ ಸಂಘಟನೆಗಳು ಉಗ್ರ ಪ್ರತಿಭಟನೆ ನಡೆಸುವ ಅಗತ್ಯವಿದೆ. ಆರೋಪಿಗಳನ್ನು ಬಂಧಿಸಿದ್ದರೂ ರಾಜಕೀಯ ಪ್ರಭಾತ ಬಳಸಿ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಂಭವವಿದ್ದು, ಸಮಾಜ ಘಾತುಕ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಕಠಿನ ಶಿಕ್ಷೆಯನ್ನು ನೀಡಬೇಕು ಮತ್ತು ಇಂತವರಿಗೆ ಬೆಂಬಲ ನೀಡುವ ರಾಜಕೀಯ ಮುಖಂಡರನ್ನು ಸಮಾಜ ಬಹಿಷ್ಕರಿಸಬೇಕು ಎಂದಿದೆ.
ಮಂಗಳೂರಿನ ವಿವಿಧ ಸಂಘಟನೆಗಳು ಮತ್ತು ಸ್ವಯಂ ಪೋಷಿತ ಬುದ್ಧಿಜೀವಿಗಳು ಹೋಂಸ್ಟೆ ಪ್ರಕರಣ ಮತ್ತು ಪಬಬ್ದಾಳಿ ಪ್ರಕರಣಗಳಲ್ಲಿ ವಸ್ತ್ರದೊಳಗೆ ಜಿರಲೆ ಸೇರಿದಂತೆ ಸಾಕಷ್ಟು ಕಿರುಚಾಡಿದ್ದು ಈ ಸಂದರ್ಭದಲ್ಲಿ ಮಾತ್ರ ಮೌನ ವಹಿಸಿರುವುದು ಅನೇಕ ಅನುಮಾನಗಳಿಗೆ ಏಡೆ ಮಾಡಿ ಕೊಟ್ಟಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಕಾರ್ಕಳ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ದೇವಾಡಿಗ, ತಾಪಂ ಅಧ್ಯಕ್ಷೆ ರಶ್ಮಿ ಶೆಟ್ಟಿ, ಜಿಪಂ ಸದಸ್ಯೆ ಸವಿತಾ ಎಸ್. ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷೆ ಸುಮಾ ಕೇಶವ್ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement