ವಿದ್ಯಾರ್ಥಿನಿಯರಿಗೆ ಬ್ಲ್ಯಾಕ್ಮೇಲ್; ಪ್ರತಿಭಟನೆ
ಕಾರ್ಕಳ: ವಿದ್ಯಾರ್ಥಿನಿಯರನ್ನು ಬ್ಲ್ಯಾಕ್ಮೇಲ್ ಮಾಡಿ ಬ್ಲೂ ಫಿಲಂ ದಂಧೆಯಲ್ಲಿ ತೊಡಗಿರುವವರಿಗೆ ಉಗ್ರ ಶಿಕ್ಷೆ ಅಗತ್ಯ ಎಂದು ಪಟ್ಟಣದ ವಿಶ್ವಹಿಂದೂ ಪರಿಷತ್ನ ನಾರಾಯಣ ಮಣಿಯಾಣಿ ಒತ್ತಾಯಿಸಿದರು.
ಇಲ್ಲಿನ ಬಸ್ ನಿಲ್ದಾಣದಲ್ಲಿ ಶುಕ್ರವಾರ ವಿಶ್ವ ಹಿಂದೂ ಪರಿಷತ್, ಬಜರಂಗ ದಳದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ವಿಹಿಂಪದ ನಾರಾಯಣ ಮಣಿಯಾಣಿ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಂತ ವಿಷಯಗಳ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಬುದ್ಧಿವಂತರ ನಾಡು ಎಂದೇ ಖ್ಯಾತಿ ಪಡೆದಿರುವ ದ.ಕ ಜಿಲ್ಲೆಯ ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳನ್ನು ಅಪಹರಿಸಿ ಬಲಾತ್ಕಾರವಾಗಿ ಬ್ಲೂಫಿಲಂ ದಂಧೆಯನ್ನು ನಡೆಸುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮಂಗಳೂರಿನ ವಿವಿಧ ಸಂಘಟನೆಗಳು ಮತ್ತು ಸ್ವಯಂಪೋಷಿತ ಬುದ್ಧಿ ಜೀವಿಗಳು, ಹೋಂಸ್ಟೇ ಪ್ರಕರಣ ಮತ್ತು ಪಬ್ ದಾಳಿ ಪ್ರಕರಣಗಳಲ್ಲಿ ಘೋಷಣೆ ಕೂಗಿದವರು ಈಗ ಮೌನ ವಹಿಸಿರುವುದು ಏಕೆ ಎಂದು ಪ್ರಶ್ನಿಸಿದ ಅವರು ಆರೋಪಿಗಳ ಮೇಲೆ ಆದಷ್ಟು ಬೇಗ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ಸುರೇಂದ್ರ ಶೆಣೈ, ಶ್ರೀಕಾಂತ ಎಣ್ಣೆಹೊಳೆ, ರತ್ನಾಕರ ಅಮೀನ್ ಅಜೆಕಾರು, ಸುನಿಲ್ ಕೆ.ಆರ್, ಬೈಲೂರಿನ ಮಹೇಶ್, ಬಿಜೆಪಿ ಯುವಮೋರ್ಚಾದ ಮಹಾವೀರ ಹೆಗ್ಡೆ, ನವೀನ್ ನಾಯಕ್ ಅತ್ತೂರು, ಪುರಸಭೆಯ ಉಪಾಧ್ಯಕ್ಷೆ ಶಶಿಕಲಾ, ಸುಮಾ ಕೇಶವ್, ಯೋಗೀಶ್ ನಾಯಕ್, ವಿಪಕ್ಷ ನಾಯಕ ಪ್ರಕಾಶ್ ರಾವ್, ಬಿಜೆಪಿ ಅಧ್ಯಕ್ಷ ಟಿ. ಗಿರಿಧರ್ ನಾಯಕ್ ಇದ್ದರು.