ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಮೃತ ಭಾರತಿ ಕಾಲೇಜು ವಾರ್ಷಿಕೋತ್ಸವ

Lingaraj Badiger
Updated On : 31 Dec 2013, 12:10 pm

ಹೆಬ್ರಿ: ವಿದ್ಯೆ ವ್ಯಾಪರೀಕರಣವಾಗದೆ ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ, ದೇಶದ ಐಕ್ಯತೆಗೆ ಪೂರಕವಾಗಿರಬೇಕು. ಸ್ವದೇಶಿ ಚಿಂತನೆಗಳಿಂದ ಕೂಡಿದ ವಿದ್ಯೆಯಿಂದ ಎಲ್ಲವೂ ಸಿದ್ಧಿಯಾಗಲಿದೆ ಎಂದು ಪೊಲೀಸ್ ಅಧಿಕಾರಿ ಕಬ್ಬಿನಾಲೆ ಪ್ರಭಾಕರ ಬಾಯರಿ ಹೇಳಿದರು. ಅವರು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಪೂ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕೆಎಂಸಿ ನಿವೃತ್ತ ಪ್ರಾಧ್ಯಾಕ, ಉಡುಪಿ ತುಳುಕೂಟದ ಡಾ. ಭಾಸ್ಕರಾನಂದ ಕುಮಾರ್, ಅಮೃತ ಭಾರತಿ ಟ್ರಸ್ಟ್‌ನ ಅಧ್ಯಕ್ಷ ರವಿರಾವ್, ಕಾಲೇಜಿನ ಆಡಳಿತ ಮಂಡಳಿಯ ಗೌರವಾಧ್ಯಕ್ಷ ರಮಣ್ ನಾಯಕ್, ಅಧ್ಯಕ್ಷ ರಾಜೇಶ್ ನಾಯಕ್ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಗುದ್ದಲಿಪೂಜೆ
ಉಡುಪಿ: ಉಡುಪಿ ತಾಲೂಕಿನ ಕುಂಜಾಲು ಗ್ರಾ.ಪಂ.ನ ಕುಂಜಾಲು- ಜಡ್ಡು ರಸ್ತೆ ಕಾಂಕ್ರಿಟಿಕರಣ ಕಾಮಗಾರಿಗೆ ಶಾಸಕ ಪ್ರಮೋದ್ ಮಧ್ವರಾಜ್ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿದರು. ಸ್ಥಳೀಯ ಜಿ.ಪಂ. ಸದಸ್ಯೆ ಗೋಪಿ ಕೆ. ನಾಯ್ಕ್, ತಾ.ಪಂ. ಸದಸ್ಯ ಉಮೇಶ್ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ, ಸ್ಥಳೀಯರಾದ ರಮೇಶ್ ಪೂಜಾರಿ, ಬಾಬು ಕೋಟ್ಯಾನ್, ಗಣೇಶ್ ಪೂಜಾರಿ, ಗುರುರಾಜ್ ರಾವ್ ಮತ್ತು ಜಿ.ಪಂ. ಎಂಜಿನಿಯರ್ ಶಶಿಧರ ನಾಯ್ಕ್ ಹಾಗೂ ಸ್ಥಳೀಯರು ಇದ್ದರು.
ಸೈಕಲ್ ವಿತರಣೆ
ಉಡುಪಿ: ಇಲ್ಲಿನ ಕಡಿಯಾಳಿ ಯು. ಕಮಲಾ ಬಾಯಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಸಕ ಪ್ರಮೋದ್  ಮಧ್ವರಾಜ್ ಸೈಕಲ್‌ಗಳನ್ನು ವಿತರಿಸಿದರು. ಮುಖ್ಯ ಶಿಕ್ಷಕ ಬಿ. ಗುಣಕರ ಶೆಟ್ಟಿ, ನಗರಸಭಾ ಸದಸ್ಯ ಹಾಗೂ ಶಾಲೆ ಹಳೆ ವಿದ್ಯಾರ್ಥಿ ಶಶಿರಾಜ್ ಕುಂದರ್, ಶ್ರೀಪತಿ ಭಟ್ ಹಾಗೂ ಶಿಕ್ಷಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement