ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಇಂದಿನಿಂದ ಪರ್ಯಾಯ ಮಂಗಲೋತ್ಸವ

Vishwanath S
Updated On : 1 Jan 2014, 1:18 am

ಉಡುಪಿ: ಕೃಷ್ಣ ಮಠದ ಪರ್ಯಾಯ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಜ. 17ರಂದು ಸಮಾಪ್ತಿಯಾಗಲಿದ್ದು, ಪರ್ಯಾಯ ಮಂಗಲೋತ್ಸವವನ್ನು ಅದ್ಧೂರಿಯಿಂದ ಆಚರಿಸಲು ನಿಶ್ಚಯಿಸಲಾಗಿದೆ.
ಈ ಪ್ರಯುಕ್ತ ಬುಧವಾರದಿಂದ ಜ. 8ರವರೆಗೆ 8 ದಿನಗಳ ಮಹಾಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರಲ್ಲಿ ದೇಶ ವಿದೇಶಗಳ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.
ಇಂದು ಶುರು: ಬುಧವಾರ, ಅಂತಾರಾಷ್ಟ್ರೀಯ ಖ್ಯಾತಿಯ ಜಾದೂಗಾರ ಕೇರಳದ ಗೋಪಿನಾಥ್ ಮುತ್ತುಕಾಡ್ ಇವರಿಂದ ಹಾಸ್ಯಮಿಶ್ರಿತ ಸಂಗೀತಮಯ ಅಮೋಘ ಜಾದೂಪ್ರದರ್ಶನ ಜರಗಲಿದೆ.
ಗುರುವಾರ ಮೈಸೂರು ಮಂಜುನಾಥ್ ನೇತೃತ್ವದಲ್ಲಿ ಜರ್ಮನಿಯ ಮಾಥ್ಯೂಸ್ ಇವರ ಗಿಟಾರ್ ವಾದನ ಸಹಿತ ವಿಶೇಷ ವಾದ್ಯ ವೈಭವ ನಡೆಯಲಿದೆ.
3ರಂದು ಮಲಯಾಳಂ ಸಿನಿಮಾರಂಗದ ಖ್ಯಾತ ಹಿನ್ನೆಲೆ ಗಾಯಕ ಶ್ರೀವತ್ಸಂ ಜೆ. ಮೆನೋನ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ, 4ರಂದು ಸರೋದ್ ಮತ್ತು ಸಂತೂರ್ ಜುಗಲ್ ಬಂದಿ, 5ರಂದು ಮೃತ್ತಿಕಾ ವೈಭವ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ಘಟಂ ವಿದ್ವಾನ್ ಸುರೇಶ್ ವೈದ್ಯನಾಥನ್ ಇವರ ನೇತೃತ್ವದಲ್ಲಿ ಇಸ್ರೇಲಿನ ಸುಪ್ರಸಿದ್ಧ ಫ್ರೇಮ್ ಡ್ರಮ್ ವಾದಕ ಜೋಹಾರ್ ಫ್ರಾಸ್ಕೋ ಹಾಗೂ ಇನ್ನಿತರ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ.
6ರಂದು ದೇಶದ ಪ್ರಸಿದ್ಧ ಗಾಯಕ ಅನುಪ್ ಜುಲೋಟಾ ಭಜನ್ ಸಂಧ್ಯಾ ಕಾರ್ಯಕ್ರಮ, 7ರಂದು ಬಹುಭಾಷಾ ನಟಿ ಶೋಭನಾ ಭರತನಾಟ್ಯ ಕಾರ್ಯಕ್ರಮ, 8ರಂದು ಚೆನ್ನೈನ ವೀಣಾ ಮಾಂತ್ರಿಕ ರಾಜೇಶ ವೈದ್ಯ ವೀಣಾವಾದನ ಕಾರ್ಯಕ್ರಮ ಜರುಗಲಿದೆ.
ಗಣ್ಯರಿಗೆ ಸನ್ಮಾನ: ಈ ಸಂದರ್ಭ, ವಿವಿಧ ಕ್ಷೇತ್ರಗಳ ಗಣನೀಯ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಮಠದ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement