ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬೇಕಾಬಿಟ್ಟಿ ತಲೆಎತ್ತಿದ ತಳ್ಳುಗಾಡಿ, ಗೂಡಂಗಡಿ; ನಗರಸಭೆ ಆಡಳಿತ, ವಿಪಕ್ಷ ಸದಸ್ಯರ ವಾಗ್ವಾದ

Vishwanath S
Updated On : 1 Jan 2014, 1:18 am

ಉಡುಪಿ: ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತಿರುವ ಗೂಡಂಗಡಿಗಳು, ತಳ್ಳುಗಾಡಿಗಳಿಗೆ ಹಿಂದಿನ ಬಿಜೆಪಿ ಆಡಳಿತ ಕಾರಣವೋ? ಇಂದಿನ ಕಾಂಗ್ರೆಸ್ ಆಡಳಿತ ಕಾರಣವೋ? ಎಂಬ ಬಗ್ಗೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಂಗಳವಾರ ವಾಗ್ವಾದವೇ ನಡೆಯಿತು.
ನಗರದಲ್ಲಿ ಬೇಕಾಬಿಟ್ಟಿ ಗೂಡಂಗಡಿಗಳು ಹಾಗೂ ತಳ್ಳುಗಾಡಿಗಳು ತಲೆಎತ್ತಿದ್ದರೂ ನಗರಸಭೆ ಯಾವುದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ ಎಂದು ವಿಪಕ್ಷ ಬಿಜೆಪಿ ನಾಯಕ ಡಾ.ಎಂ.ಆರ್. ಪೈ ಸಭೆಯಲ್ಲಿ ಆರೋಪಿಸಿದರು.
ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸದಸ್ಯ ರಮೇಶ್ ಕಾಂಚನ್, ಈ ಗೂಡಂಗಡಿಗಳು, ತಳ್ಳುಗಾಡಿಗಳು ಈಗ ಹುಟ್ಟಿಕೊಂಡವುಗಳಲ್ಲ, ಬಿಜೆಪಿ ಆಡಳಿತದಲ್ಲಿಯೇ ಹುಟ್ಟಿಕೊಂಡಿದ್ದವು, ಇದನ್ನು ಅರಿತುಕೊಂಡು ವಿಪಕ್ಷ ನಾಯಕರು ಮಾತನಾಡಲಿ. ಅನಗತ್ಯವಾಗಿ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವುದು ಬೇಡ ಎಂದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷ ಯುವರಾಜ್, ಗೂಡಂಗಡಿ ಹಾಗೂ ತಳ್ಳುಗಾಡಿ ಸಮಸ್ಯೆ ಇಂದಿನದ್ದಲ್ಲ. ಬದಲಾಗಿ ಬಹಳ ಹಿಂದಿನಿಂದಲೂ ಈ ಒಂದು ಸಮಸ್ಯೆ ನಗರದಲ್ಲಿದೆ. ಕಾಂಗ್ರೆಸ್ ಆಡಳಿತ ಬಂದ ಮೇಲೆ ಯಾವುದೇ ಹೊಸ ಗೂಡಂಗಡಿಗಳಿಗೆ ಪರವಾನಗಿ ನೀಡಿಲ್ಲ. ಪರವಾನಗಿ ಇಲ್ಲದ ಗೂಡಂಗಡಿಗಳಿದ್ದರೆ ಅವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದರು.
ಬ್ಯಾನರ್ ತೆರವು  ಚರ್ಚೆ: ನಗರದಲ್ಲಿ ಎಲ್ಲೆಂದರಲ್ಲಿ ಬ್ಯಾನರ್‌ಗಳು ರಾರಾಜಿಸುತ್ತಿವೆ. ಉಡುಪಿ ಉತ್ಸಕ್ಕೆ ಸಂಬಂಧಪಟ್ಟಂತೆ ನಗರಸಭೆಯ ಸದಸ್ಯರು ತಮ್ಮ ಭಾವಚಿತ್ರಗಳನ್ನು ಹಾಕಿ ಬ್ಯಾನರ್‌ಗಳನ್ನು ಹಾಕಿದ್ದಾರೆ. ಇದಕ್ಕೆ ನಗರಸಭೆಯಿಂದ ಪರವಾನಗಿ ಪಡೆದುಕೊಂಡಿದ್ದಾರೆಯೇ? ಎಂದು ಎಂ.ಆರ್. ಪೈ ಪ್ರಶ್ನಿಸಿದರು. ಇದಕ್ಕೆ ಯಶ್‌ಪಾಲ್ ಸುವರ್ಣ ಹಾಗೂ ಶಾಂತರಾಮ ಸಾಲ್ವಾಂಣ್‌ಕರ್ ಧ್ವನಿಗೂಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕಾಂಚನ್, ಉಡುಪಿ ಉತ್ಸವಕ್ಕೆ ಶುಭಾಶಯ ಕೋರಿ ಹಾಕಲಾಗಿರುವ ಬ್ಯಾನರ್ ಪ್ರಚಾರಕ್ಕಾಗಿ, ಉತ್ಸವದಿಂದ ಬರುವ ಲಾಭವನ್ನು ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ. ಆದರೆ ಪ್ರಯೋಜನವಿಲ್ಲದ ಅದೆಷ್ಟೋ ಬ್ಯಾನರ್‌ಗಳು ನಗರದಲ್ಲಿವೆ. ಅದರತ್ತ ವಿರೋಧ ಪಕ್ಷದವರು ಗಮನಹರಿಸಿ ಎಂದರು. ಈ ಬಗ್ಗೆ ಉತ್ತರಿಸಿದ ಅಧ್ಯಕ್ಷರು ಪರವಾನಗಿ ಪಡೆಯದ ಬ್ಯಾನರ್‌ಗಳನ್ನು ತೆರವುಗೊಳಿಸಲಾಗುತ್ತದೆ ಎಂದರು.   ಕುಂಡ್ಸೆಪ್ ಯೋಜನೆಯಡಿ ಜಿಲ್ಲೆಗೆ 85 ಕೋಟಿ ಮಂಜೂರಾಗಿದೆ. ಹಣ ಬಿಡುಗಡೆಯಾದ ತಕ್ಷಣ ಒಳಚಂರಡಿ ದುರಸ್ತಿ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಇದಕ್ಕೆ ಸಮಯವಕಾಶ ತಗಲುತ್ತದೆ ಎಂದು ಶಾಸಕ ಪ್ರಮೋಧ್ ಮಧ್ವರಾಜ್ ಅವರು ನವೀನ್ ಭಂಢಾರಿ ಅವರು ಒಳಚರಂಡಿ ಹಾಗೂ ಕುಡಿವ ನೀರಿನ ಸಮಸ್ಯೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು.
ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ್ ರಾವ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement