ಮಾರುಕಟ್ಟೆ ಸುಧಾರಣೆಗೆ ಸರ್ಕಾರದ ಮುತುವರ್ಜಿ ಅಗತ್ಯ: ವಿನೋದ್
ಕಾರ್ಕಳ: ಮಾರುಕಟ್ಟೆ ಸುಧಾರಣಾ ಯುಗದಲ್ಲಿ ಸರ್ಕಾರದ ಮುತುವರ್ಜಿ ಅಗತ್ಯ ಎಂದು ಬೆಂಗಳೂರಿನ ಅರ್ಥಶಾಸ್ತ್ರಜ್ಞ ಮಾಹಿತಿ ತಂತ್ರಜ್ಞಾನ ಕೇಂದ್ರದ ಸಲಹೆಗಾರ ಡಾ. ವಿನೋದ್ ವ್ಯಾಸುಲು ಹೇಳಿದ್ದಾರೆ.
ನಿಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯಲ್ಲಿ ಭಾನುವಾರ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವರ್ಷ ಕಳೆದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಆರ್ಥಿಕ ಅಸಮಾನತೆ ತೀವ್ರವಾಗುತ್ತಿದೆ. ಹೀಗಾಗಿ ದೇಶದ ವಿವಿಧ ರಂಗಗಳಲ್ಲಿ ಮಾನಸಿಕ ಒತ್ತಡಗಳು ತಲೆದೋರಿವೆ. ಭಾರತದ ಪ್ರಜಾಪ್ರಭುತ್ವ ಈಗ ನಿರ್ಣಾಯಕ ಹಂತದಲ್ಲಿದ್ದು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರ ಪ್ರಯತ್ನ ನಡೆಸಬೇಕಾಗಿದೆ ಎಂದರು.
ನಿಟ್ಟೆ ವಿ.ವಿ. ಕುಲಪತಿ ಎನ್. ವಿನಯ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಾಡಳಿತ ಸಂಸ್ಥೆಯ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ. ಎನ್.ಕೆ. ತಿಂಗಳಾಯ, ಎನ್.ಎಂ.ಎ.ಎಂ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ ಚಿಪಳೂಣ್ಕರ್ ಇದ್ದರು. ಕೆ. ಶಂಕರನ್ ಸ್ವಾಗತಿಸಿದರು. ಸಮ್ಮೇಳನದ ಡಾ. ಜಿ.ವಿ. ಜೋಷಿ ಪ್ರಾಸ್ತಾವಿಕ ಮಾತನಾಡಿಡದರು. ಕಾರ್ಯದರ್ಶಿ ಪ್ರೊ. ಎಸ್. ಸರವಣನ್ ವಂದಿಸಿದರು. ಡಾ. ಸುಧೀರ್‌ರಾಜ್ ಕೆ. ನಿರ್ವಹಿಸಿದರು.