ಬೈಕ್ ಕಳವು ಆರೋಪಿ ಸೆರೆ
ಕುಂದಾಪುರ: ಇಲ್ಲಿನ ಹೆಸ್ಕತ್ತೂರು ಎಂಬಲ್ಲಿ ಕೆಲವು ದಿನಗಳ ಹಿಂದೆ ಬೈಕು ಕಳವು ಮಾಡಿದ್ದ ಆರೋಪಿಯನ್ನು ಕುಂದಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ನಿವಾಸಿ ಪ್ರಭಾಕರ (25) ಬಂಧಿತ ಆರೋಪಿ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಠಾಣೆಯ ಅಪರಾಧ ವಿಭಾಗದ ಎಸೈ ರೇವತಿ ಮತ್ತು ಸಿಬ್ಬಂದಿ ಚಿತ್ರದುರ್ಗದಲ್ಲಿ ಬಂಧಿಸಿ, ಕುಂದಾಪುರಕ್ಕೆ ಕರೆತಂದಿದ್ದಾರೆ. ಆತನನ್ನು ಗುರುವಾರ ಕುಂದಾಪುರ ನ್ಯಾಯಾಲಯ ಹಾಜರುಪಡಿಸಲಾಗಿದ್ದು, ಫೆ. 15ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆತನಿಂದ ಕದ್ದ ಬೈಕ್ ವಶಪಡಿಸಿಕೊಂಡು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.