ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪತ್ರಕರ್ತನ ಮೇಲೆ ತಂಡ ಹಲ್ಲೆ

Lingaraj Badiger
Updated On : 4 Feb 2013, 12:49 pm

ಕುಂದಾಪುರ: ಇಲ್ಲಿನ ಹೆಮ್ಮಾಡಿ ಸರ್ಕಲ್ ಬಳಿ ಪತ್ರಕರ್ತರ ಮೇಲೆ ಗುಂಪು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ಶನಿವಾರ ರಾತ್ರಿ ನಡೆದಿದೆ. 'ವಿಜಯವಾಣಿ' ಪತ್ರಿಕೆಯ ಉಡುಪಿ ಜಿಲ್ಲಾ ವರದಿಗಾರ ಶ್ರೀಪತಿ ಹೆಗಡೆ ಹಕ್ಲಾಡಿ ಹಲ್ಲೆಗೊಳಗಾದವರು. ಅವರು ರಾತ್ರಿ ಉಡುಪಿಯಿಂದ ಮನೆಗೆ ತೆರಳುವ ಸಂದರ್ಭ ಹೆಮ್ಮಾಡಿ ಸರ್ಕಲ್ ಬಳಿ ಅಡ್ಡಗಟ್ಟಿದ ಮೂವರ ತಂಡ, ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ. ಗ್ರಾ.ಪಂ. ಒಂದರ ಬಗ್ಗೆ ಅವರು ಬರೆದ ವರದಿ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು, ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪತ್ರಕರ್ತರ ಸಂಘ ಖಂಡನೆ: ಈ ಕೃತ್ಯವನ್ನು ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಖಂಡಿಸಿದೆ. ಯಾವುದೇ ಪತ್ರಿಕಾ ವರದಿಗಳ ಬಗ್ಗೆ ಯಾರಿಗಾದರೂ ಅಸಮಾಧಾನವಿದ್ದರೆ ಅದನ್ನು ಕಾನೂನುಬದ್ಧ ಕ್ರಮಗಳಲ್ಲಿಯೇ ಬಗೆಹರಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ಈ ರೀತಿಯ ದೈಹಿಕ ಹಲ್ಲೆಗಳನ್ನು ಪತ್ರಕರ್ತರ ಸಮುದಾಯ ಎಂದಿಗೂ ಸಹಿಸದು ಎಂದು ಸಂಘಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement