ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪಾದಯಾತ್ರೆಯಲ್ಲಿ 'ಕೈ'ಚಳಕ: ಐವರ ಸೆರೆ

Lingaraj Badiger
Updated On : 5 Feb 2013, 11:49 am

ಉಡುಪಿ: ಇತ್ತೀಚೆಗೆ ನಡೆದ ಕಾಂಗ್ರೆಸ್ ಪಾದಯಾತ್ರೆ ಸಂದರ್ಭ 5ಕ್ಕೂ ಹೆಚ್ಚು ಮಂದಿಯ ಕಿಸೆಗಳ್ಳತನ ಮಾಡಿದ ಅಂತರ್‌ಜಿಲ್ಲಾ ಕಿಸೆಗಳ್ಳರನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
 ಭದ್ರಾವತಿ ತಾಲೂಕಿನವರಾದ ತಮ್ಮಯ್ಯ ಯಾನೆ ಬಗಣೆ (30), ಲಕ್ಷ್ಮಣ ಯಾನೆ ಲಕ್ಷ್ಮ (42), ರಮೇಶ (20), ವೆಂಕಟೇಶ ಯಾನೆ ಕುಳ್ಳ ವೆಂಕಟೇಶ (26), ಮಂಜುನಾಥ ಯಾನೆ ಮಂಜ (19) ಬಂಧಿತರು. ಇವರು ಜನ ಸೇರುವ ಸಮಾವೇಶ ಹಾಗೂ ಜಾತ್ರೆ, ಜನಸ್ತೋಮಗಳಲ್ಲಿ ತಮ್ಮ ಕೈಚಳಕದಿಂದ ಕಿಸೆಗಳ್ಳತನ ಮಾಡುವುದರಲ್ಲಿ ಪರಿಣತರಾಗಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಉಡುಪಿ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯ್ಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಇತ್ತೀಚೆಗೆ ಕಾಂಗ್ರೆಸ್ ಪಾದಯಾತ್ರೆ ಸಂದರ್ಭ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಅವರ ಕಿಸೆಗಳ್ಳತನ ನಡೆಸುತ್ತಿದ್ದಾಗ ಬಂಧಿಸಿದ್ದಾರೆ.
 ಈ ಆರೋಪಿಗಳು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿದಂತೆ ಸುಮಾರು 5 ಮಂದಿಯಿಂದ ಲಕ್ಷಾಂತರ ರುಪಾಯಿ ಕಳ್ಳತನ ಮಾಡಿರುವುದಾಗಿ ತಿಳಿದುಬಂದಿದೆ. ಬಂಧಿತ ಆರೋಪಿಗಳಿಂದ ಪೊಲೀಸರು ರು. 79 ಸಾವಿರ ನಗದು ಹಣ ವಶಪಡಿಸಿಕೊಂಡಿದ್ದಾರೆ. ಉಡುಪಿ ಮತ್ತು ಮಲ್ಪೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement