ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬ್ರಹ್ಮಾವರ ತಾಲೂಕು ರಚನೆಗೆ ಆಗ್ರಹಿಸಿ ಆಮರಣ ಉಪವಾಸ ಸತ್ಯಾಗ್ರಹ ಆರಂಭ

Lingaraj Badiger
Updated On : 5 Feb 2013, 11:49 am

ಬ್ರಹ್ಮಾವರ: ಬ್ರಹ್ಮಾವರ ಮತ್ತು ಕೋಟ ಹೋಬಳಿಗಳನ್ನು ಸೇರಿಸಿಕೊಂಡು ಬ್ರಹ್ಮಾವರ ತಾಲೂಕು ರಚನೆ ಮಾಡುವಂತೆ ಆಗ್ರಹಿಸಿ ಬ್ರಹ್ಮಾವರ ತಾಲೂಕು ರಚನಾ ಹೋರಾಟ ಸಮಿತಿಯು ಸೋಮವಾರದಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಿದೆ.
ಫೆ.8ರಂದು ಮಂಡಿಸಲಾಗುವ ರಾಜ್ಯ ಬಜೆಟ್‌ನಲ್ಲಿ ಬ್ರಹ್ಮಾವರವನ್ನು ತಾಲೂಕನ್ನಾಗಿ ಘೋಷಿಸಬೇಕು ಎಂದು ಸಮಿತಿಯು ಸರ್ಕಾರವನ್ನು ಒತ್ತಾಯಿಸುವ ಸಲುವಾಗಿ ಸತ್ಯಾಗ್ರಹ ಆರಂಭಿಸಿದ್ದು, ಇದಕ್ಕೆ ಮೊದಲು ಭಾನುವಾರ ಬ್ರಹ್ಮಾವರ ಬಂದ್ ಕರೆ ನೀಡಿತ್ತು. ಭಾನುವಾರವಾದ್ದರಿಂದ ಬಹುತೇಕ ಅಂಗಡಿ ಮುಂಗಟ್ಟುಗಳು ಮೊದಲೇ ಬಂದ್ ಆಗಿದ್ದವು, ಬಿಟ್ಟರೆ ಅಂತಹ ಸಕಾರಾತ್ಮಕ ಪ್ರತಿಕ್ರಿಯೆ ಏನೂ ವ್ಯಕ್ತವಾಗಿರಲಿಲ್ಲ. ಸೋಮವಾರ ಸಮಿತಿ ಅಧ್ಯಕ್ಷ ಸತೀಶ ಪೂಜಾರಿ ನೇತೃತ್ವದಲ್ಲಿ ಹತ್ತಿಪ್ಪತ್ತು ಮಂದಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ಸಂದರ್ಭ ಅವರೊಂದಿಗಿದ್ದ ಸುಮಾರು ನೂರು ಮಂದಿ ಕಾಲೇಜು ವಿದ್ಯಾರ್ಥಿಗಳು ಬಿಸಿಲೇರುತ್ತಿದ್ದಂತೆ ಕಾಲೇಜು ಸೇರಿದ್ದರು. ಬಿಜೆಪಿ ನಾಯಕ ಜ್ಞಾನ ವಸಂತ ಶೆಟ್ಟಿ, ಚಾಂತಾರು ಗ್ರಾಪಂ ಮಾಜಿ ಅಧ್ಯಕ್ಷೆ ಜಯಂತಿ ವಾಸುದೇವ, ಜಯ ಕರ್ನಾಟಕ ಸಂಘಟನೆಯ ನಿರಂಜನ ಹೆಗ್ಡೆ, ತಾಲೂಕು ರಚನಾ ಸಮಿತಿ ಕಾರ್ಯದರ್ಶಿ ಸಂತೋಷ ಕುಮಾರ್ ಹಂದಾಡಿ, ಕೋಟ ವಲಯ ಜನಜಾಗೃತಿ ವೇದಿಕೆಯ ಅಚ್ಯುತ್ ಪೂಜಾರಿ, ಹಂದಾಡಿ ಗ್ರಾಪಂ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವಾರಂಬಳ್ಳಿ ಗ್ರಾಪಂ ಉಪಾಧ್ಯಕ್ಷ ಕ್ರಿಸ್ಟಿನ್ ಡಿಸಿಲ್ವ, ಕರ್ಜೆ ಗ್ರಾಪಂ ಅಧ್ಯಕ್ಷೆ ಸುಧಾ ಭಟ್, ಹಾರಾಡಿ ಗ್ರಾಪಂ ಅಧ್ಯಕ್ಷ ನಾರಾಯಣ ಶ್ರೀಯಾನ್, ಕುಂಜಾಲು ಗ್ರಾಪಂ ಉಪಾಧ್ಯಕ್ಷ ರಾಜು ಕುಲಾಲ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement