ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪುರಂದರ ದಾಸ, ಸಂಗೀತ ತ್ರಿಮೂರ್ತಿ ಉತ್ಸವ

Lingaraj Badiger
Updated On : 6 Feb 2013, 11:26 am

ಉಡುಪಿ: ಬೆಳ್ಳಿಹಬ್ಬ ಆಚರಿಸುತ್ತಿರುವ ರಾಗಧನ ಸಂಸ್ಥೆಯ ವತಿಯಿಂದ ಪುರಂದರದಾಸ ಮತ್ತು ಸಂಗೀತ ತ್ರಿಮೂರ್ತಿ ಉತ್ಸವ ಮಣಿಪಾಲ ವಿವಿ ಕಟ್ಟಡದಲ್ಲಿ ಜರುಗಿತು.
 ಮೂರು ದಿನಗಳ ಉತ್ಸವಕ್ಕೆ ಮಣಿಪಾಲ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಸಂಯೋಜನೆ ಸಮಿತಿಯ ಅಧ್ಯಕ್ಷ ಡಾ. ಮುರಳೀಧರ ವಿ. ಪೈ ಚಾಲನೆ ನೀಡಿದರು.
ಹಿರಿಯ ಕಲಾ ವಿಮರ್ಶಕ ಎ. ಈಶ್ವರಯ್ಯ ಅವರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು.
 ಈ ಸಂದರ್ಭ ಮಾತನಾಡಿದ ಅವರು ನಮ್ಮ ಬದುಕಿನಲ್ಲಿ ಸಂಗೀತದಂತಹಾ ಸಾಂಸ್ಕೃತಿಕ ಕಲಾ ಪ್ರಕಾರಗಳು ಎಷ್ಟು ಅಗತ್ಯ ಅನ್ನುವುದು ಸಾಂಸ್ಕೃತಿಕ ಪ್ರಜ್ಞೆ ಇರುವವರಿಗೆ ಮಾತ್ರ ಗೊತ್ತಿದೆ. ನಮ್ಮ ಸಂಸ್ಕೃತಿಯನ್ನು ಉನ್ನತ ಮಟ್ಟದಲ್ಲಿ ಸಂವಹನ ಮಾಡಬಲ್ಲ ಮಾಧ್ಯಮ ಸಂಗೀತ ಎಂದು ಹೇಳಿದರು.
ಮೂರು ದಿನಗಳ ಸಂಗೀತೋತ್ಸವದಲ್ಲಿ ಚೆನ್ನೈನ ವಸುಧಾ ಕೇಶವ, ಜ್ಯೋತಿಲಕ್ಷ್ಮಿ ಉಡುಪಿ, ಹರೀಶ್ ಹೆಗಡೆ ಹಳಹಳ್ಳಿ, ಮಂಗಳೂರಿನ ಕೃಷ್ಣಪವನ್ ಕುಮಾರ್ ಅವರ ಶಾಸ್ತ್ರೀಯ ಸಂಗೀತ ನಡೆಯಿತು. ಪಿಳ್ಳಾರಿ ಗೀತೆಗಳು ಹಾಗೂ ತ್ಯಾಗರಾಜರ ಘನರಾಗ, ಪಂಚರತ್ನ ಕೃತಿಗಳ ಗೋಷ್ಠಿ ಗಾಯನವೂ ನಡೆಯಿತು.
ಸಮಾರೋಪ: ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರಿನ ಮಣಿಕೃಷ್ಣಸ್ವಾಮಿ ಅಕಾಡೆಮಿಯ ನಿರ್ದೇಶಕ ಪಿ. ನಿತ್ಯಾನಂದ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
 ಸಂಸ್ಥೆಯ ಅಧ್ಯಕ್ಷ ಎ. ಈಶ್ವರಯ್ಯ, ಕಾರ್ಯದರ್ಶಿ ವಿ. ಅರವಿಂದ ಹೆಬ್ಬಾರ್  ಉಪಸ್ಥಿತರಿದ್ದರು. ಬಳಿಕ ಚೆನ್ನೈನ ಪ್ರಸಿದ್ಧ ಗಾಯಕಿಯರಾದ ರಂಜನಿ ಮತ್ತು ಗಾಯತ್ರಿ ಬಳಗದವರಿಂದ ಪ್ರಧಾನ ಶಾಸ್ತ್ರೀಯ ಸಂಗೀತ ಕಛೇರಿ ಮನಸೂರೆಗೊಂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement