ಕಾರ್ಕಳ: ಶಾಲೆಗೆ ಹೋದ ಇಬ್ಬರು ಮಕ್ಕಳು ನಾಪತ್ತೆ
ಕಾರ್ಕಳ: ಇಲ್ಲಿನ ಕಸಬ ಗ್ರಾಮದ ಶಾಲೆಯೊಂದರಿಂದ ಇಬ್ಬರು ಮಕ್ಕಳು ನಾಪತ್ತೆಯಾದ ಘಟನೆ ಮಂಗಳವಾರ ನಡೆದಿದೆ.
ಕಾಣೆಯಾದವರು ಇಲ್ಲಿನ ಮಿಯಾರು ಗ್ರಾಮದ ಜೋಡುಕಟ್ಟೆಯ ನಿವಾಸಿ ಸತೀಶ್ ಎಂಬವರ ಮಗ ಮನೀಷ್ (13) ಮತ್ತು ನಿಟ್ಟೆ ಗ್ರಾಮದ ಗುಂಡ್ಯಡ್ಕ ಸಮೀಪದ ಅತ್ತೂರು ಪದವು ನಿವಾಸಿ ವಲೇರಿಯನ್ ಫೆರ್ನಾಂಡಿಸ್ ಎಂಬವರ ಮಗ ಆಸ್ಟೀನ್ ಫೆನಾಂಂಡಿಸ್ (13), ಅವರಿಬ್ಬರೂ ಕಸಬ ಗ್ರಾಮದ ಕ್ರೈಸ್ಟ್ ಕಿಂಗ್ ಇಂಗ್ಲಿಷ್ ಮೀಡಿಯಂ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಇಬ್ಬರೂ ತಮ್ಮ ಮನೆಯಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಶಾಲೆಗೆಂದು ಹೋಗಿದ್ದವರು, ಶಾಲೆಗೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಲೋಕೇಶ್ ಗೌಡ ಎಂಬವರು ನೀಡಿದ ದೂರಿನಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.