ನಾಳೆ ಹಗ್ಗಜಗ್ಗಾಟ ಸ್ಪರ್ಧೆ
ಉಡುಪಿ: ಬಿಜೆಪಿಯ ಕಾಪು ವಿಧಾನ ಸಭಾ ಕ್ಷೇತ್ರ ಮತ್ತು ಪೆರ್ಡೂರು ಸ್ಥಾನೀಯ ಯುವ ಮೋರ್ಚಾದ ವತಿಯಿಂದ ದಿವಂಗತ ಆದರ್ಶ ಸ್ಮರಣಾರ್ಥವಾಗಿ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಹಗ್ಗಜಗ್ಗಾಟ ಸ್ಪರ್ಧಾ ಕೂಟವು 'ವಜ್ರಕಾಯ - 2013' ಫೆ. 10ರಂದು ಜರಗಲಿದೆ ಎಂದು ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ ಸುವರ್ಣ ತಿಳಿಸಿದರು.
ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೆರ್ಡೂರು ಸ್ಥಾನೀಯ ಬಿಜೆಪಿ ಅಧ್ಯಕ್ಷ ಸುಧಾಕರ್ ಶೆಟ್ಟಿ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಅಂಕಣವನ್ನು ಎಪಿಎಂಸಿ ಅಧ್ಯಕ್ಷ ಸುರೇಶ್ ನಾಯಕ ಮಾಡಲಿದ್ದಾರೆ. ಪೆರ್ಡೂರಿನ ತಾ.ಪಂ., ಗ್ರಾ.ಪಂ. ಸದಸ್ಯರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ರು. 44,444, ದ್ವಿತೀಯ ಬಹುಮಾನ ರು. 22,222, ತೃತೀಯ ಬಹುಮಾನ ರು. 11,111, ಚತುರ್ಥ ಬಹುಮಾನ ರು. 6,666 ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪೆರ್ಡೂರು ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದ್ ಕುಲಾಲ್ ಮತ್ತು ದಿನೇಶ್ ಹೆಗ್ಡೆ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರಕಾಶ್ ಶೇರಿಗಾರ್ ಇದ್ದರು.