ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಮಾದಕ ದ್ರವ್ಯ ತಡೆಗೆ ಕ್ರಮ

Lingaraj Badiger
Updated On : 9 Feb 2013, 11:06 am

ಉಡುಪಿ: ಇತ್ತೀಚೆಗೆ ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಯೊಬ್ಬರು ಮಾದಕ ದೃವ್ಯ ಸೇವನೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿಯೂ ಮಾದಕ ದ್ರವ್ಯ ಮಾರಾಟ ತಡೆಗಟ್ಟುವುದಕ್ಕೆ ಪೊಲೀಸರು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.
ಅದಕ್ಕಾಗಿ 5 ತಂಡಗಳನ್ನು ಫೆ. 6 ಮತ್ತು 7ರಂದು ಪ್ರಮುಖವಾಗಿ ಉಡುಪಿ, ಮಣಿಪಾಲ ಹಾಗೂ ಕಾರ್ಕಳಗಳ ಕಾಲೇಜು ಪ್ರದೇಶ, ನಗರಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಉಡುಪಿ ವೃತ್ತ ನಿರೀಕ್ಷಕ ಮಾರುತಿ ನಾಯಕ್, ಮಣಿಪಾಲ ನಿರೀಕ್ಷಕ ಸದಾನಂದ ತಿಪ್ಪಣ್ಣನವರ್, ಡಿಸಿಐಬಿ ನಿರೀಕ್ಷಕ ಪ್ರವೀಣ್ ನಾಯಕ್, ಉಡುಪಿ ಡಿವೈಎಸ್ಪಿ ಡಾ. ಪ್ರಭುದೇವ ಮಾನೆ, ಕಾರ್ಕಳ ವೃತ್ತ ನಿರೀಕ್ಷಕ ವೆಲೆಂಟೀನ್ ಡಿ' ಸೋಜಾ ನೇತೃತ್ವದ ಈ ತಂಡಗಳು ವಿಶೇಷ ಗಸ್ತು ನಡೆಸಿದವು.
ಸ್ವತಃ ಎಸ್ಪಿ ಡಾ. ಬೋರಲಿಂಗಯ್ಯ ಅವರು ಮಣಿಪಾಲ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯವರೊಂದಿಗೆ ಮಾತುಕತೆ ನಡೆಸಿ, ಮಣಿಪಾಲ ಕ್ಯಾಂಪಸ್ ಒಳಗೆ ಮಾದಕ ದ್ರವ್ಯ ಬಳಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ವಿದ್ಯಾರ್ಥಿಗಳ ಚಲನ ವಲನಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಸಮುದ್ರದಲ್ಲಿ ಮುಳುಗಿ ವಿದ್ಯಾರ್ಥಿ ಸಾವು
ಮಲ್ಪೆ: ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಲ್ಲಿನ ಕೋಡಿಬೆಂಗ್ರೆಯಲ್ಲಿ ಗುರುವಾರ ನಡೆದಿದೆ. ಅಭಿಷೇಕ್ ದುಬೆ ಮೃತರು. ಈತ ಮಣಿಪಾಲ ಟಿ.ಎ.ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಎಂಬಿಎ ವಿದ್ಯಾರ್ಥಿಯಾಗಿದ್ದು, ಗುರುವಾರ ಮಧ್ಯಾಹ್ನ 12.30ಕ್ಕೆ ಮಲ್ಪೆ ಸಮೀಪದ ಕೋಡಿಬೇಂಗ್ರೆ ಸಮುದ್ರ ಕಿನಾರೆಗೆ ಬಂದಿದ್ದ. ಅವರ ಪೈಕಿ 5 ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ಕುಳಿತಿದ್ದು, ಅಭಿಷೇಕ್ ದುಬೆ ಹಾಗೂ ಕೇಶವ್ ಸುಂದರ ಸಮುದ್ರಕ್ಕೆ ಇಳಿದಿದ್ದರು. ಏರಿ ಬಂದ ಆಲೆಯೊಂದಕ್ಕೆ ಅಭಿಷೇಕ್ ಕೊಚ್ಚಿಕೊಂಡು ಹೋಗಿದ್ದು, ತಕ್ಷಣ ಸ್ನೇಹಿತ ಅತುಲ್ ಪೈ ಹಾಗೂ ಸ್ಥಳೀಯರು ಸೇರಿ ನೀರಿಲ್ಲಿ ಹುಡುಕಿ ದಡಕ್ಕೆ ತಂದು, ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆತಂದರಾದರೂ, ಆತ ಅದಾಗಲೇ ಮೃತಪಟ್ಟಿದ್ದ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ನೀರಿಗೆ ಬಿದ್ದು ವ್ಯಕ್ತಿ ಸಾವು
ಮಲ್ಪೆ: ಇಲ್ಲಿನ ಸಮುದ್ರ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವ್ಯಕ್ತಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಮೃತರು ಕೃಷ್ಣಪ್ಪ ಅಮೀನ್ (60) ಶುಕ್ರವಾರ ಬೆಳಗ್ಗೆ 4 ಗಂಟೆಗೆ ನಾಡದೋಣಿಯಲ್ಲಿ ಮೀನುಗಾರಿಕೆಗೆ ಮಲ್ಪೆ ಬಂದರಿಗೆ ಹೋಗಿದ್ದರು. ಬೆಳಗ್ಗೆ 7.30ಕ್ಕೆ ದಯಕರ ಎಂಬವರು ಅವರ ಮನೆಗೆ ಕರೆ ಮಾಡಿ ಕೃಷ್ಣಪ್ಪ ದೇಹ ಹೊಳೆ ನೀರಿನಲ್ಲಿ ತೆಲುತ್ತಿರುವುದಾಗಿ ತಿಳಿಸಿದರು. ಅವರು ಮೀನುಗಾರಿಕೆಗೆ ತೆರಳುವುದಕ್ಕೆ ದೋಣಿ ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬೇಕು ಎಂದು ಭಾವಿಸಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement