ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಹೊಸ ತಾಲೂಕು ಪಟ್ಟಿಯಲ್ಲಿ 'ಹೆಬ್ರಿ' ಇಲ್ಲ; ಇಂದು ಬಂದ್ ಕರೆ

Lingaraj Badiger
Updated On : 9 Feb 2013, 11:05 am

ಹೆಬ್ರಿ: ಹೆಬ್ರಿ ತಾಲೂಕು ಆಗುತ್ತದೆ ಎಂಬ ತವಕದಲ್ಲಿ ಜನತೆಗೆ  ಶುಕ್ರವಾರ ವಿಧಾನಸಭೆಯಲ್ಲಿ ಮಂಡನೆಯಾದ ರಾಜ್ಯದ ಬಜೆಟ್‌ನಲ್ಲಿ ಹೆಬ್ರಿ ತಾಲೂಕನ್ನು ಕೈ ಬಿಟ್ಟು ಸಂಭ್ರಮಕ್ಕೆ ತಣ್ಣೀರು ಎರಚಿದೆ ಎಂದು ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿ ಪ್ರಮುಖ ನೀರೆ ಕೃಷ್ಣ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶನಿವಾರಹೆಬ್ರಿ ಬಂದ್‌ಗೆ ಕರೆ ನೀಡಲಾಗಿದೆ.  
ಕಳೆದ 30 ವರ್ಷಗಳ ಸಕಲ ಸಿದ್ಧತೆಯ ಹೆಬ್ರಿ ತಾಲೂಕು ಹೋರಾಟಕ್ಕೆ ಸರ್ಕಾರ ಎಳ್ಳು ನೀರು ಬಿಟ್ಟು ತಾಲೂಕು ರಚನೆಯ ಸಮಿತಿಯ ಶಿಫಾರಸ್ಸು ಬದಿಗೆ ಹಾಕಿ ಜನತೆಗೆ ದ್ರೋಹ ಮಾಡಿದ್ದು, ಹೆಬ್ರಿ ಪರಿಸರದ ಜನತೆ ಇದನ್ನು ಸಹಿಸುವುದಿಲ್ಲ. ಯಶಸ್ಸು ದೊರೆಯುವ ತನಕ ಹೋರಾಟ ಆರಂಭಿಸಲು ಸಕಲ ವ್ಯವಸ್ಥೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಸುಮಾ ಅಡ್ಯಂತಾಯ, ಮುಖಂಡ ಹೆಬ್ರಿ ಪ್ರಸನ್ನ ಬಲ್ಲಾಳ್, ತಾಲೂಕು ರಚನೆಗೆ ಆಗುವ ತನಕದ ಹೋರಾಟದ ಸಂಪೂರ್ಣ ಖರ್ಚು ಭರಿಸುವುದಾಗಿ ಘೋಷಿಸಿದರು.
ಜಿ.ಪಂ. ಸದಸ್ಯ ಮಂಜುನಾಥ ಪೂಜಾರಿ, ತಾಲೂಕು ರಚನಾ ಹೋರಾಟ ಸಮಿತಿ ಮುಖ್ಯಸ್ಥ ಭಾಸ್ಕರ ಜೋಯಿಸ್, ಪ್ರಮುಖರಾದ ಸುಕುಮಾರ್ ಮುನಿಯಾಲ್, ಭೂತುಗುಂಡಿ ಕರುಣಾಕರ ಶೆಟ್ಟಿ, ಕೆರೆಬೆಟ್ಟು ಸಂಜೀವ ಶೆಟ್ಟಿ, ಎಚ್.ಕೆ. ಶ್ರೀಧರ ಶೆಟ್ಟಿ, ಎಚ್.ಕೆ. ನಾರಾಯಣ ನಾಯಕ್, ಸ್ಥಳೀಯ ಪ್ರಮುಖರಾದ ಪೆರ್ಡೂರು ಶಾಂತಾರಾಮ ಸೂಡ, ಹೆಬ್ರಿ ಮೋಹನದಾಸ ನಾಯಕ್, ಮೂರ್ಸಾಲು ಮೋಹನದಾಸ್ ನಾಯಕ್, ರಾಧಾಕೃಷ್ಣ ನಾಯಕ್, ಟಿ.ಜಿ. ಆಚಾರ್ಯ, ಎಸ್.ಆರ್. ನಾಗರಾಜ ಶೆಟ್ಟಿ, ನವೀನ ಅಡ್ಯಂತಾಯ, ಸೀತಾನದಿ ಚಂದ್ರಶೇಖರ ಶೆಟ್ಟಿ, ಸೀತಾನದಿ ರಮೇಶ ಹೆಗ್ಡೆ, ಧೀರಜ್ ಕುಮಾರ್ ಶೆಟ್ಟಿ, ಕರವೇಯ ಪ್ರಮುಖರಾದ ಸಿ.ಎಂ. ಪ್ರಸನ್ನ ಕುಮಾರ್, ಚೈತನ್ಯದ ಹೆಬ್ರಿ ಜನಾರ್ದನ್, ಸುಜಾತ ಲಕ್ಷ್ಮಣ ಆಚಾರ್ಯ, ಹೆಬ್ರಿ ರಾಜೀವ ಶೆಟ್ಟಿ, ಚಾರ ವಾಧಿರಾಜ ಶೆಟ್ಟಿ,ಪಡುಕುಡೂರು ಜಗದೀಶ ಹೆಗ್ಡೆ, ಚಾರ ರತ್ನಾಕರ ಶೆಟ್ಟಿ, ಚಂದ್ರಶೇಖರ ಬಾಯರಿ, ಅಜೆಕಾರಿನ ಡಾ. ಸಂತೋಷ ಕುಮಾರ್ ಶೆಟ್ಟಿ, ಹೆಬ್ರಿ ತಾಲೂಕು ವ್ಯಾಪ್ತಿಯ ಪಂಚಾಯಿತಿ ಅಧ್ಯಕ್ಷ ಹೆಬ್ರಿಯ ಸುಮಾ ಅಡ್ಯಂತಾಯ, ಮುದ್ರಾಡಿಯ ಜಯಲಕ್ಷ್ಮೀ, ಪೆರ್ಡೂರಿನ ಶಿವರಾಮ ಶೆಟ್ಟಿ, ವರಂಗದ ಜ್ಯೋತಿ ಹರೀಶ್ ಪೂಜಾರಿ, ನಾಡ್ಪಾಲಿನ ಲಕ್ಷ್ಮೀ ದಯಾನಂದ್, ಕುಚ್ಚೂರಿನ ಗೀತಾ ಶ್ಯಾಮ ನಾಯಕ್, ಮರ್ಣೆಯ ಹೀರಾ ಶೆಟ್ಟಿ ಮುಂತಾದವರು ಖಂಡಿಸಿದ್ದಾರೆ.
ಹೆಬ್ರಿ ಬಂದ್‌ಗೆ ಕರೆ: ಹೆಬ್ರಿಯನ್ನು ತಾಲೂಕಾಗಿ ಘೋಷಣೆ ಮಾಡದೇ ಕೈಬಿಟ್ಟಿರುವುದನ್ನು ಖಂಡಿಸಿ ಶನಿವಾರ ಹೆಬ್ರಿ ಸಂಪೂರ್ಣ ಬಂದ್‌ಗೆ ತಾಲೂಕು ರಚನಾ ಹೋರಾಟ ಸಮಿತಿಯ ಸಂಚಾಲಕ ನೀರೆ ಕೃಷ್ಣ ಶೆಟ್ಟಿ ಮನವಿ ಮಾಡಿದ್ದಾರೆ.
ಹೆಬ್ರಿಗೆ ವಿಶೇಷ ತಹಸೀಲ್ದಾರ್ ನೇಮಕವಾಗಲಿ: ಹೆಬ್ರಿಯಲ್ಲಿ ಮೊದಲು ವಿಶೇಷ ತಹಸೀಲ್ದಾರ್ ನೇಮಕವಾಗದಿರುವುದೇ ಹೆಬ್ರಿ ತಾಲೂಕು ಘೋಷಣೆಗೆ ಹಿನ್ನಡೆಯಾಗಿದೆ. ಅತೀ ಶೀಘ್ರವಾಗಿ ವಿಶೇಷ ತಹಸೀಲ್ದಾರ್ ನೇಮಕ ಮಾಡಿ ತಾಲೂಕು ಘೋಷಣೆ ಮಾಡುವಂತೆ ಸಂಘಟಕ ಶೇಖರ ಅಜೆಕಾರು ಒತ್ತಾಯಿಸಿದ್ದಾರೆ.
ನ್ಯಾಯಲಯಕ್ಕೆ ಮೊರೆ ಸಿದ್ಧತೆ: ಸಮಿತಿಯ ಶಿಫಾರಸು ಇದ್ದರೂ ಹೆಬ್ರಿಯನ್ನು ನೂತನ ತಾಲೂಕು ಘೋಷಣೆಯಿಂದ ರಾಜಕೀಯ ಕಾರಣಕ್ಕೆ ಕೈ ಬಿಟ್ಟಿರುವುದು ಅನ್ಯಾಯ. ಕೂಡಲೇ ನ್ಯಾಯಲಯದ ಮೊರೆ ಹೋಗಿ ನ್ಯಾಯ ಬೇಡುವುದಾಗಿ ಹೆಬ್ರಿಯ ಪ್ರಮುಖರಾದ ಪ್ರಸನ್ನ ಬಲ್ಲಾಳ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement