ತಾಲೂಕಿಗೆ ಆಗ್ರಹಿಸಿ ಹೆಬ್ರಿ ಪೂರ್ಣ ಬಂದ್
ಹೆಬ್ರಿ: ನೂತನ ತಾಲೂಕು ರಚನೆಗೆ ಉಡುಪಿ ಜಿಲ್ಲೆಯಲ್ಲಿ ಹೆಬ್ರಿಯನ್ನು ಎಂ.ಬಿ. ಪ್ರಕಾಶ್ ನೇತೃತ್ವದ ಆಯೋಗ ಶಿಫಾರಸು ಮಾಡಿದ್ದರೂ ರಾಜ್ಯದ ಸರ್ಕಾರ ಹೆಬ್ರಿಯನ್ನು ಕೈಬಿಟ್ಟು ಅನ್ಯಾಯ ಮಾಡಿರುವುದನ್ನು ವಿರೋಧಿಸಿ ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿ ಮತ್ತು ವಿವಿಧ ಸಂಘಸಂಸ್ಥೆಗಳು ಶನಿವಾರ ಹೆಬ್ರಿ ತಾಲೂಕು ಘೋಷಣೆಗೆ ಒತ್ತಾಯಿಸಿ ಹೆಬ್ರಿ ಬಂದ್ ನಡೆಸಿದರು.
ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಬಂದ್ಗೆ ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿಯ ಜತೆಗೆ ಹೆಬ್ರಿ ಬ್ಲಾಕ್ ಕಾಂಗ್ರೆಸ್, ಗ್ರಾಪಂ, ಹೆಬ್ರಿ ಪರಿಸರದ ಜನಪ್ರತಿನಿಧಿಗಳು, ಪಂಚಾಯಿತ್ ರಾಜ್ ವ್ಯವಸ್ಥೆಯ ಪ್ರತಿನಿಧಿಗಳು, ಹೆಬ್ರಿ ಪರಿಸರದ ಹೆಬ್ರಿ ಸಿಟಿ ಲಯನ್ಸ್ ಕ್ಲಬ್, ಜೇಸಿಐ, ಕರವೇ, ಜಯ ಕರ್ನಾಟಕ, ರಿಕ್ಷ ಚಾಲಕ ಮಾಲೀಕರ ಸಂಘ, ಟ್ಯಾಕ್ಸಿಮೆನ್ ಯೂನಿಯನ್, ಸವಿತಾ ಸಮಾಜ, ಹೆಬ್ರಿ ಪತ್ರಕರ್ತರ ಸಂಘ, ಚೈತನ್ಯ ಯುವ ವೃಂದ, ಚಾರ ನಾಗರಿಕ ಹೋರಾಟ ಸಮಿತಿ, ಹೆಬ್ರಿ ವಿವಿಧ ಕಾಲೇಜು ಸಂಘಟನೆಗಳು, ಪ್ರಗತಿಪರ ನಾಗರಿಕ ಹೋರಾಟ ಸಮಿತಿ, ಹೆಬ್ರಿ ವ್ಯಾಪಾರಸ್ಥರ ಸಂಘ, ಕಾರ್ಮಿಕರು, ಪ್ರಯಾಣಿಕರು, ವಿದ್ಯಾರ್ಥಿಗಳು, ಜನ ಸಮುದಾಯ ಸೇರಿದಂತೆ ಎಲ್ಲರೂ ಸೇರಿ ಹೆಬ್ರಿ ಬಂದ್ ನಡೆಸಿದರು.
ಕಾಣದ ಕೈಗಳ ತೊಂದರೆ-ಶಾಸಕ: ತಾಲೂಕು ರಚನಾ ಹೋರಾಟ ಸಮಿತಿ ಮತ್ತು ವಿವಿಧ ಸಂಘಸಂಸ್ಥೆಗಳ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಗೋಪಾಲ ಭಂಡಾರಿ, ಹೆಬ್ರಿಯ ಅಭಿವೃದ್ಧಿಗೆ ನಿರಂತರವಾಗಿ ಕಾಣದ ಕೈಗಳು ತೊಂದರೆ ಮಾಡುತ್ತಿದ್ದು ಹೆಬ್ರಿ ತಾಲೂಕು ರಚನೆಗೆ ಹೆಬ್ರಿ ಮತ್ತು ತಾಲೂಕಿನ ರಾಜಕೀಯ ಶಕ್ತಿಗಳ ಕೈವಾಡವಿರುವುದು ಗುಟ್ಟಾಗಿ ಉಳಿದಿಲ್ಲ. ಬ್ರಹ್ಮಾವರವನ್ನು ತಾಲೂಕು ಮಾಡಲು ಹೆಬ್ರಿ ಕೈಬಿಡಲಾಗಿದೆ. ಹೆಬ್ರಿಗೆ ಎಂದೂ ಅನ್ಯಾಯವಾಗಲು ಬಿಡುವುದಿಲ್ಲ, ನಿರಂತರ ಹೋರಾಟಕ್ಕೆ ತಾವು ಜತೆಯಲ್ಲಿರುವುದಾಗಿ ಭರವಸೆ ನೀಡಿದರು.
ಹೆಬ್ರಿ ತಾಲೂಕು ರಚನಾ ಹೋರಾಟ ಸಮಿತಿ ಸಂಚಾಲಕ ನೀರೆ ಕೃಷ್ಣ ಶೆಟ್ಟಿ, ಮುಖ್ಯಸ್ಥ ಭಾಸ್ಕರ ಜೋಯಿಸ್, ಹೆಬ್ರಿಯ ಹಿರಿಯ ಮುಖಂಡ ಪ್ರಸನ್ನ ಬಲ್ಲಾಳ್, ಜಿಪಂ ಸದಸ್ಯ ಮಂಜುನಾಥ ಪೂಜಾರಿ, ಎಚ್.ಕೆ. ಶ್ರೀಧರ ಶೆಟ್ಟಿ, ಕರವೇಯ ಪ್ರಸನ್ನ ಕುಮಾರ್ ಶೆಟ್ಟಿ ಮಾತನಾಡಿದರು.
ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಸುಮಾ ನವೀನ್ ಅಡ್ಯಂತಾಯ, ಮುದ್ರಾಡಿಯ ಜಯಲಕ್ಷ್ಮೀ, ಕಿಸಾನ್ ಸಂಘದ ರಾಜೀವ ಶೆಟ್ಟಿ, ಮಹಿಳಾ ಮುಖಂಡೆ ಸುಜಾತ ಲಕ್ಷ್ಮಣ ಆಚಾರ್ಯ, ರಾಜೇಶ ಭಂಡಾರಿ ಹುತ್ತುರ್ಕ್, ಸುಬ್ರಹ್ಮಣ್ಯ ಹೇರಳೆ, ಜಯ ಕರ್ನಾಟಕದ ಅಣ್ಣಪ್ಪ ಕುಲಾಲ್, ರಿಕ್ಷಾ ಚಾಲಕರ ಸಂಘದ ಜಯಕರ ಆಮ್ಲರ್, ಟ್ಯಾಕ್ಸಿ ಯೂನಿಯನ್ನ ಅರುಣ್ ಕುಮಾರ್ ಹೆಗ್ಡೆ, ಸವಿತಾ ಸಮಾಜದ ಸುರೇಶ ಭಂಡಾರಿ, ಹೆಬ್ರಿ ಪತ್ರಕರ್ತರ ಸಂಘದ ಸುಕುಮಾರ್ ಮುನಿಯಾಲ್, ಸಂಘಟಕ ಭಾಸ್ಕರ ರಾವ್, ಚೈತನ್ಯದ ಜನಾರ್ದನ್, ಜೇಸಿಐನ ಲಕ್ಷ್ಮೀನಾರಾಯಣ ಜೋಯಿಸ್, ಲಯನ್ಸ್ನ ಚಂದ್ರಶೇಖರ ಜೋಯಿಸ್, ವಿದ್ಯಾರ್ಥಿ ಪ್ರಮುಖ ಚೇತನ್ ಕುಮಾರ್ ಸೇರಿದಂತೆ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರಮುಖರು, ಸ್ಥಳೀಯ ಪ್ರಮುಖರು ಭಾಗವಹಿಸಿದ್ದರು. ಹೆಬ್ರಿ ತಾಲೂಕು ಘೋಷಣೆಯಾಗದಿದ್ದರೆ ಶೀಘ್ರದಲ್ಲೇ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಚಾಲಕ ನೀರೆ ಕೃಷ್ಣ ಶೆಟ್ಟಿ ಪ್ರಕಟಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.