ಮಧ್ವಾಚಾರ್ಯರೇ ದಾಸ ಸಾಹಿತ್ಯಕ್ಕೆ ಸ್ಫೂರ್ತಿ: ಸೋದೆ ಶ್ರೀ
ವ್ಯಾಸ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಕಣ್ಣುಗಳಿದ್ದ ಹಾಗೆ...
ಉಡುಪಿ: ವ್ಯಾಸ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡು ಕಣ್ಣುಗಳಿದ್ದ ಹಾಗೆ. ಯಾವುದೂ ಮೇಲಲ್ಲ, ಯಾವುದೂ ಕೀಳಲ್ಲ. ಎರಡೂ ಸರಿಸಮಾನವಾದುದು ಎಂದು ಪರ್ಯಾಯ ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಕಷ್ಣಮಠ ಹಾಗೂ ಅಖಿಲ ಭರತ ಹರಿದಾಸ ಸಮ್ಮೇಳನ ಟ್ರಸ್ಟ್ ಆಶ್ರಯದಲ್ಲಿ ಫೆ.11ರವರೆಗೆ ನಡೆಯುವ 36ನೇ ಅಖಿಲ ಭರತ ಹರಿದಾಸ ಸಮ್ಮೇಳನ ಹಾಗೂ ಶ್ರೀಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ತ್ಯಾಗರಾಜರು ಪುರಂದರ ದಾಸರ ಕೀರ್ತನೆಗಳನ್ನು ಕೇಳಿ ಬೆಳೆದರು, ಹಾಗಾಗಿ ತ್ಯಾಗರಾಜರಿಗೆ ಪುರಂದರ ದಾಸರು ಸ್ಫೂರ್ತಿಯಾದರು. ಪುರಂದರದಾಸರು ವ್ಯಾಸರಾಜರು, ಮಧ್ವಾಚಾರ್ಯರಿಂದ ಪ್ರೇರಿತರಾಗಿ ಕೀರ್ತನೆಗಳನ್ನು ರಚಿಸಿದರು. ದಾಸ ಸಾಹಿತ್ಯಕ್ಕೆ ಮಧ್ವಾಚಾರ್ಯರು ಮೂಲ ಸ್ಫೂರ್ತಿ ಎಂದವರು ತಿಳಿಸಿದರು.
ಹರಿದಾಸವಾಣಿ ಸಂಸ್ಥೆ ಹೊರ ತಂದಿರುವ “ಶ್ರೀಮದ್ಭಾಗವತ’ ಮತ್ತು ಬಿ.ಕೆ. ಸುಮತಿ ರಾವ್ ಅವರ “ಹರಿದಾಸ ಸೂಕ್ತಿ ಚಂದ್ರಿಕಾ’ ಕತಿಗಳನ್ನು ಶ್ರೀಗಳು ಇದೇ ಸಂದರ್ಭ ಅನಾವರಣಗೊಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮತ್ತು ಉಪಸ್ಥಿತರಿದ್ದ ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಸಮಾರಂಭದಲ್ಲಿ ತಿರುಪತಿ ತಿರುಮಲ ದೇವಸ್ಯಂನ ಮಾಜಿ ವಿಶೇಷಾಧಿಕಾರಿ ಪಿ.ವಿ.ಆರ್.ಕೆ. ಪ್ರಸಾದ್, ಅಖಿಲ ಭಾರತ ಹರಿದಾಸ ಸಮ್ಮೇಳನ ಟ್ರಸ್ಟ್ ಅಧ್ಯಕ್ಷ ಎಂ.ಜಿ. ಮಾಧವರಾಯ ಇದ್ದರು. ಖಗವರಧ್ವಜ ವಿಠಲದಾಸರು ಸ್ವಾಗತಿಸಿದರು. ಸರ್ವಾಧಾರ ವಿಠಲದಾಸ ವಸಂತ ಕುಮಾರ್ ಪ್ರಸ್ತಾವನೆಗೈದರು. ವರಾಹ ವಿಠಲದಾಸ ವೆಂಕಟೇಶ ನಿರೂಪಿಸಿದರು.
ಪುತ್ತೂರು ನರಸಿಂಹ ನಾಯಕ್ ಅವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.