ಬೈಂದೂರು ತಾಲೂಕು ರಚನೆ ಘೋಷಣೆ ಸಂತಸ
ಉಡುಪಿ: ಬೈಂದೂರು ತಾಲೂಕು ರಚನೆ ಘೋಷಣೆಯಾದ ಬಗ್ಗೆ ಕುಂದಾಪುರ ತಾಲೂಕು ರೈತ ಸಂಘದಿಂದ ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ವಿಜಯೋತ್ಸವ ಆಚರಿಸಲಾಯಿತು. ಬೈಂದೂರಿನಿಂದ ಶಿರೂರಿನವರೆಗೆ ಹಾಗೂ ಬೈಂದೂರಿನಿಂದ ಉಪ್ಪುಂದದವರೆಗೆ ಬೈಕ್ ರ್ಯಾಲಿ ಮುಖಾಂತರ ವಿಜಯಾಚರಣೆ ಮಾಡಿದರು. ಕೃಷಿ ಬಜೆಟ್ ರೈತರಿಗೆ ಸಂತೋಷದಾಯಕವಾಗಿದೆ. ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದೀಪಕ್ ಕುಮಾರ ಶೆಟ್ಟಿ, ಸುಬ್ರಹ್ಮಣ್ಯ ಪೂಜಾರಿ, ಫಯಾಜ್ ಬೈಂದೂರು, ಶೇಖರ, ಹಸನ, ಹೆರಿಯಣ್ಣ ಶೆಟ್ಟಿ , ಶಬ್ಬಿರ, ಮಂಜುನಾಥ ಆಚಾರ್ಯ, ನೌಷಾದ್, ರಾಘು ಇದ್ದರು.