'ರೆಕ್ಕೆ ಕಟ್ಟುವಿರಾ' ನಾಟಕ ಪ್ರದರ್ಶನ
ಮಣಿಪಾಲ: ಇಲ್ಲಿನ ಪದವಿ ಪೂರ್ವ ಕಾಲೇಜಿನ ಚಿನ್ನಾರಿ ಮಕ್ಕಳ ರಂಗ ತಂಡದ ಪ್ರಸ್ತುತಿ ಬಿ. ಸುರೇಶ ಅವರ 'ರೆಕ್ಕೆ ಕಟ್ಟುವಿರಾ' ನಾಟಕವು ಇತ್ತೀಚೆಗೆ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಪ್ರಾದೇಶಿಕ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ 'ಮಳೆಬಿಲ್ಲು ಮಕ್ಕಳ ನಾಟಕೋತ್ಸವ'ದಲ್ಲಿ ಪ್ರದರ್ಶನಗೊಂಡಿದೆ.ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಈ ಏಕೈಕ ನಾಟಕವನ್ನು ನಿರ್ದೇಶಿಸಿದವರು ನಾಡಿನ ಸೃಜನಶೀಲ ನಿರ್ದೇಶಕ ಶಿರಸಿಯ ಡಾ. ಶ್ರೀಪಾದ ಭಟ್, ನೃತ್ಯ ಸಂಯೋಜನೆ ಮಂಜುಳಾ ಸುಬ್ರಹ್ಮಣ್ಯ, ರಂಗ ಪರಿಕರ ಹಾಗೂ ಚಿತ್ರಕಲೆ ಹೊನ್ನಾವರದ ದಾಮೋದರ್ ನಾಯ್ಕ್ ಹಾಗೂ ಸುದರ್ಶನ್ ಭಟ್ಕಳ, ಪ್ರಸಾದನ ದಿವಾಕರ ಕಟೀಲು ಮಾಡಿದರು.