ಹೆಬ್ರಿ: ಲೋಕಕಲ್ಯಾಣಾರ್ಥ ಸಾಮೂಹಿಕ ಶನಿ ಮಹಾಯಾಗ
ಹೆಬ್ರಿ: ಶನಿಯಿಂದ ಜನಸಮುದಾಯಕ್ಕೆ ಬರುವ ಕಷ್ಟನಷ್ಟ ಆಪತ್ತು ವಿಪತ್ತುಗಳಿಂದ ದೂರಮಾಡಲು ಲೋಕ ಕಲ್ಯಾಣಾರ್ಥವಾಗಿ ಹೆಬ್ರಿಯಲ್ಲಿ ಪ್ರಥಮ ಬಾರಿಗೆ ಹೆಬ್ರಿಯ ತಾಣ ಶ್ರೀ ಅರ್ಧನಾರೀಶ್ವರ ಗೆಳೆಯರ ಬಳಗದ ವತಿಯಿಂದ ಭಾನುವಾರ ತಾಣ ಶ್ರೀ ಅರ್ಧನಾರೀಶ್ವರ ಸನ್ನಿಧಿಯಲ್ಲಿ ಸಾಮೂಹಿಕ ಶನಿ ಮಹಾಯಾಗ ಶನಿ ಶಾಂತಿ ನಡೆಯಿತು.
ತಂತ್ರಿಗಳಾದ ಬಾರ್ಕೂರು ಋಷೀಕೇಶ ಬಾಯರಿಯವರ ಪ್ರಧಾನ ಪೌರೋಹಿತ್ಯದಲ್ಲಿ ಬೆಳಗ್ಗೆ 8 ಗಂಟೆಯಿಂದ ಸಾಮೂಹಿಕ ಶನಿ ಮಹಾಯಾಗ ಶನಿ ಶಾಂತಿ ಪೂಜೆ, ಮಹಾಪೂಜೆ, ಮಹಾಪೂರ್ಣಾಹುತಿ ಸಂಭ್ರಮದಿಂದ ನಡೆಯಿತು. ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಭಾಗವಹಿಸಿದ್ದರು. ಅನ್ನಪ್ರಸಾದ ವಿನಿಯೋಗ ಮತ್ತು ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ನಡೆಯಿತು. ಹೆಬ್ರಿಯ ತಾಣ ಶ್ರೀ ಅರ್ಧನರೀಶ್ವರ ಗೆಳೆಯರ ಬಳಗದ ಗೌರವಾಧ್ಯಕ್ಷ ನಿತ್ಯಾನಂದ ನಾಯಕ್, ಅಧ್ಯಕ್ಷ ತಾಣ ರಮೇಶ ಭಟ್, ಕಾರ್ಯದರ್ಶಿ ಕೃಷ್ಣ ಎಂ. ಸೇರಿದಂತೆ ಸಮಿತಿಯ ಮುಖಂಡರು ಇದ್ದರು.