ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಬೈರಂಪಳ್ಳಿ: ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ (ಸುದ್ದಿ ಸಂಕ್ಷೇಪ)

Mainashree
Updated On : 16 Feb 2013, 11:02 am

ಉಡುಪಿ: ಇಲ್ಲಿನ ಬೈರಂಪಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೂರು ಪಟ್ಟಿಬಾವು ಮತ್ತು ಜಡ್ಡುಹಾಲಕ್ಕಿ ಮೂಡುಮನೆ ನಡುವೆ ಸಂಪರ್ಕ ಕಲ್ಪಿಸುವ ಸುಮಾರು ರು. 1.50 ಕೋಟಿ ಮೊತ್ತದ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಇತ್ತೀಚೆಗೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಉಡುಪಿ ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್, ತಾ.ಪಂ. ಉಪಾಧ್ಯಕ್ಷ ರಾಮ ಕುಲಾಲ್, ಬೈರಂಪಳ್ಳಿ ಗ್ರಾ.ಪಂ. ಅಧ್ಯಕ್ಷ ಪ್ರಮೀಳಾ ಎನ್. ಹೆಗ್ಡೆ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್. ಜಿಯಾನಂದ ಹೆಗ್ಡೆ, ತಾ.ಪಂ. ಮಾಜಿ ಸದಸ್ಯ ಬಿ. ಪದ್ಮರಾಜ್ ರಾವ್, ಗ್ರಾ.ಪಂ. ಸದಸ್ಯೆ ಸಂಪ ಪೂಜಾರ್ತಿ ಮತ್ತು ಸಂತೋಷ ಪೂಜಾರಿ, ಗುತ್ತಿಗೆದಾರ ಉದಯ ಕುಮಾರ್ ಶೆಟ್ಟಿ, ಸಾಂತ್ಯಾರು ಸತೀಶ್ ಶೆಟ್ಟಿ, ಗಣೇಶ ಹೆಗ್ಡೆ ಮತ್ತು ಗ್ರಾಮಸ್ಥರು ಇದ್ದರು.

ಮಿತ್ರ ಸಂಗಮ- ಇಂದು 16ನೇ ವಾರ್ಷಿಕೋತ್ಸವ
ಕುಂದಾಪುರ: ಬೀಜಾಡಿ-ಗೋಪಾಡಿ ಮಿತ್ರ ಸಂಗಮ 16ನೇ ವಾರ್ಷಿಕೋತ್ಸವ ಶನಿವಾರ ರಾತ್ರಿ 7.30ಕ್ಕೆ ಬೀಜಾಡಿ ಮೂಡು ಶಾಲಾ ಬಯಲು ರಂಗ ಮಂಟಪದಲ್ಲಿ ಜರುಗಲಿದೆ. ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಸಿ ರಾವ್ ಶಿವಪುರ ಪಾಲ್ಗೊಳ್ಳಲಿದ್ದಾರೆ. ಶಿಕ್ಷಣ ಪ್ರೇಮಿ ಶೇಷಗಿರಿ ಗೋಟ ಇವರಿಗೆ ನಮ್ಮೂರ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬೀಜಾಡಿ ಮೂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಎಚ್.ಪದ್ಮನಾಭ ಅಡಿಗ ಶುಭಾಶಂಸನೆ ನೆರವೇರಿಸಲಿದ್ದಾರೆ. ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು, ಸಂಸ್ಥೆಯ ಸದಸ್ಯರಿಂದ ಸಂಜೀವ ಕದ್ರಿಕಟ್ಟು ನಿರ್ದೇಶನದ ಪ್ರೀತಿ ಚಿಗುರಿತು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement