ಮನೆಯಿಂದ ಸೊತ್ತು, ಸೈಕಲ್ ಕಳವು
ಉಡುಪಿ: ಕೊಲ್ಲೂರು ವ್ಯಾಪ್ತಿಯ ಚಿತ್ತೂರು ಗ್ರಾಮದ ಹಾರ್ಮಣ್ ಎಂಬಲ್ಲಿ ಗುರುವಾರ ರಾತ್ರಿ ಮನೆಯಲ್ಲಿ ಕಳವು ನಡೆದಿದೆ.
ಇಲ್ಲಿನ ನಿವಾಸಿ ಶಾಂತ ಬಾಯಿ ಎಂಬವರ ಮನೆಯ ಹೊರಗಿನ ಬಚ್ಚಲುಮನೆ ಬಾಗಿಲು ತೆಗೆದು ಒಳಗಿದ್ದ ತಾಮ್ರದ ಹಂಡೆ, ದನದ ಕೊಟ್ಟಿಗೆಯಲ್ಲಿದ್ದ ತಾಮ್ರದ ಚರಿಗೆ, ತಾಮ್ರದ ಕಾವಲಿ ಹಾಗೂ ಸೈಕಲ್ ಕಳವು ಮಾಡಿದ್ದಾರೆ.
ಕಳವಾದ ಸೊತ್ತು ಅಂದಾಜು ಮೌಲ್ಯ ರು. 23,000 ಎಂದು ಶಾಂತ ಬಾಯಿ ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.