ಉಡುಪಿಯಲ್ಲಿ ಸಾಧಾರಣ ಮಳೆ
ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಭಾನುವಾರ ಮುಂಜಾನೆ ಹಠಾತ್ತನೇ ಸಾಧಾರಣ ಮಳೆಯಾಯಿತು. ಶನಿವಾರ ಮುಂಜಾನೆಯೂ ಕಾರ್ಕಳ ಮತ್ತು ಕುಂದಾಪುರ ತಾಲೂಕಿನ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿತ್ತು. ಆದರೆ, ಉಡುಪಿ ತಾಲೂಕಿನಲ್ಲಿ ಮಳೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ತಂಪಿನ ಹಿತದ ಅನುಭವವಾಯಿತಾದರೂ, ಮಳೆಗಾಲ ಇನ್ನೂ ಆರಂಭವಾಗಿಲ್ಲ ಮತ್ತು ಈಗ ಸುರಿದ ಮಳೆಯ ಪ್ರಮಾಣ ಬಹಳ ಕಡಿಮೆಯಾದ್ದರಿಂದ ಭಾನುವಾರ ಮಧ್ಯಾಹ್ನದ ನಂತರ ವಿಪರೀತ ಸೆಕೆಯ ವಾತಾವರಣ ಕಂಡು ಬಂತು.